ಶ್ರೀನಗರ: ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ, ಒಳನುಸುಳುವಿಕೆಗೆ ಉತ್ತೇಜನ ನೀಡುತ್ತಿದ್ದ ಕಮಾಂಡರ್ ಬಷೀರ್ ಅಹ್ಮದ್ ಮಲಿಕ್‌ನನ್ನು ಉರಿ ವಲಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಶ್ರೀನಗರ: ಪಾಕಿಸ್ತಾನ ಆಕ್ರಮಿಕ ಕಾಶ್ಮೀರದಲ್ಲಿ ಭಯೋತ್ಪಾದನೆ ಚಟುವಟಿಕೆ, ಒಳನುಸುಳುವಿಕೆಗೆ ಉತ್ತೇಜನ ನೀಡುತ್ತಿದ್ದ ಕಮಾಂಡರ್ ಬಷೀರ್ ಅಹ್ಮದ್ ಮಲಿಕ್‌ನನ್ನು ಉರಿ ವಲಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಹತ್ಯೆ ಮಾಡಿವೆ.
ಬುಧವಾರ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಲಿಕ್ ಮತ್ತು ಇನ್ನೊಬ್ಬ ಭಯೋತ್ಪಾದಕ ಹತರಾದರು ಎಂದು ಸೇನೆಯು ಗುರುವಾರ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆ ಜೊತೆಗೆ ಗಡಿಯಲ್ಲಿ ಒಳನುಸುಳುವಿಕೆ ಚಟುವಟಿಕೆಗೆ ಮಲಿಕ್ ಉತ್ತೇಜನ ನೀಡುತ್ತಿದ್ದ. ಉಗ್ರ ಸಂಘಟನೆಗಳ ಕಾರ್ಯಚಟುವಟಿಕೆಗೆ ಪ್ರಮುಖವಾಗಿ ಬೆಂಗಾವಲಾಗಿದ್ದ ಎಂದು ಸೇನೆಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ವಲಯದಲ್ಲಿ 30 ವರ್ಷಗಳಿಂದ ಸಕ್ರಿಯನಾಗಿದ್ದ ಈಗ, ಹಲವು ಉಗ್ರರು ಗಡಿಯಲ್ಲಿ ಅಕ್ರಮವಾಗಿ ನುಸುಳಲು ಕಾರಣನಾಗಿದ್ದ. ಉಗ್ರರ ಕಾರ್ಯಚಟುವಟಿಕೆಯಿಂದಾಗಿ ಹಲವು ನಾಗರಿಕರು, ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು ಎಂದು ಅಧಿಕಾರಿ ವಿವರಿಸಿದರು.
ಈತನ ಹತ್ಯೆಯು ಉಗ್ರ ಚಟುವಟಿಕೆಯ ವಿರುದ್ಧ ನಡೆಸುತ್ತಿದ್ದ ಕಾರ್ಯಾಚರಣೆಗೆ ದೊಡ್ಡ ಗೆಲುವಾಗಿದೆ. ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಪುನರಾವರ್ತಿತವಾಗಿ ಒಳನುಸುಳುವಿಕೆ ಯತ್ನಗಳು ನಡೆದಿದ್ದವು. ಗುಪ್ತದಳದ ಖಚಿತ ಮಾಹಿತಿಯನ್ನು ಆಧರಿಸಿ ನ.15ರಂದು ಜಂಟಿ ಕಾರ್ಯಾಚರಣೆಯು ಆರಂಭವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.