ಒಟ್ಟಾವ: ಕೆನಡಾದ ಸಂಸದ ಚಂದ್ರಶೇಖರ್ ಆರ್ಯ ಅವರು ಇಲ್ಲಿನ ಪಾರ್ಲಿಮೆಂಟ್ ಹಿಲ್‌ನಲ್ಲಿ ದೀಪಾವಳಿ ಆಯೋಜಿಸಿದ್ದರು. ಈ ವೇಳೆ ಅವರು 'ಓಂ' ಚಿಹ್ನೆ ಒಳಗೊಂಡಿರುವ ಹಿಂದೂ ಧ್ವಜ ಹಾರಿಸಿದರು.
ಒಟ್ಟಾವ: ಕೆನಡಾದ ಸಂಸದ ಚಂದ್ರಶೇಖರ್ ಆರ್ಯ ಅವರು ಇಲ್ಲಿನ ಪಾರ್ಲಿಮೆಂಟ್ ಹಿಲ್‌ನಲ್ಲಿ ದೀಪಾವಳಿ ಆಯೋಜಿಸಿದ್ದರು. ಈ ವೇಳೆ ಅವರು 'ಓಂ' ಚಿಹ್ನೆ ಒಳಗೊಂಡಿರುವ ಹಿಂದೂ ಧ್ವಜ ಹಾರಿಸಿದರು.
ಕರ್ನಾಟಕದ ಆರ್ಯ ಅವರು ಭಾನುವಾರ ಆಯೋಜಿಸಿದ್ದ ದೀಪಾವಳಿಗೆ ಒಟ್ಟಾವ, ದಿ ಗ್ರೇಟರ್ ಟೊರೊಂಟೊ ಪ್ರದೇಶ ಮತ್ತು ಮಾಂಟ್ರಿಯಲ್ ಸೇರಿದಂತೆ ಕೆನಡಾದ ಹಲವು ನಗರಗಳಿಂದ ಭಾರತೀಯ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
'ಪಾರ್ಲಿಮೆಂಟ್ ಹಿಲ್‌ನಲ್ಲಿ ದೀಪಾವಳಿ ಆಯೋಜಿಸಿದ್ದಕ್ಕೆ ನನಗೆ ಸಂತಸವಾಗಿದೆ. ಈ ಸಂದರ್ಭದಲ್ಲಿ ನಾವು 'ಓಂ' ಚಿಹ್ನೆ ಒಳಗೊಂಡ ಹಿಂದೂ ಧ್ವಜವನ್ನು ಹಾರಿಸಿದೆವು' ಎಂದು ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾರ್ಲಿಮೆಂಟ್ ಹಿಲ್ ಎಂಬುದು ಕೆನಡಾದ ಫೆಡರಲ್ ಸರ್ಕಾರದ ನೆಲೆ. ಇಲ್ಲಿ ಕೆನಡಾದ ಜನಪ್ರತಿನಿಧಿಗಳು ದೇಶದ ಜನರಿಗಾಗಿ ಕಾನೂನೂಗಳನ್ನು ರೂಪಿಸುತ್ತಾರೆ.
'ಈ ಆಚರಣೆಗೆ ಕೆನಡಾದಲ್ಲಿರುವ 67 ಹಿಂದೂ ಮತ್ತು ಇಂಡೊ- ಕೆನಡಾ ಸಂಘಟನೆಗಳು ಬೆಂಬಲ ನೀಡಿದ್ದವು' ಎಂದು ಅವರು ಹೇಳಿದ್ದಾರೆ.