ಕೊಲಂಬೊ: ಮೂರು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಶುಕ್ರವಾರ ಶ್ರೀಲಂಕಾದ ಜಾಫ್ನಾದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಕೊಲಂಬೊ: ಮೂರು ದಿನಗಳ ಶ್ರೀಲಂಕಾ ಪ್ರವಾಸದಲ್ಲಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಶುಕ್ರವಾರ ಶ್ರೀಲಂಕಾದ ಜಾಫ್ನಾದಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
'ಶ್ರೀಲಂಕಾದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ನಿರ್ಮಲಾ ಸೀತಾರಾಮನ್ ಅವರು, ಜಾಫ್ನಾ ಜಿಲ್ಲೆಯಲ್ಲಿರುವ ನಲ್ಲೂರ್ ಕಂದಸ್ವಾಮಿ ಕೋವಿಲ್‌ಗೆ ಭೇಟಿ ನೀಡಿದ್ದಾರೆ'ಎಂದು ಅವರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ನಲ್ಲೂರ್ ಕಂದಸ್ವಾಮಿ ಕೋವಿಲ್ ಅಥವಾ ನಲ್ಲೂರ್ ಮುರುಗನ್ ಕೋವಿಲ್ ದೇವಾಲಯವು ಹಿಂದೂಗಳ ಅತ್ಯಂತ ಪ್ರಮುಖ ದೇಗುಲಗಳಲ್ಲಿ ಒಂದಾಗಿದೆ.
ಈ ದೇಗುಲವು ಶ್ರೀಲಂಕಾ ತಮಿಳರು ಹಿಂದೂಗಳು ಎಂದು ಗುರುತಿಸಿಕೊಳ್ಳುವಲ್ಲಿ ಸಾಮಾಜಿಕವಾಗಿ ಅತ್ಯಂತ ಪ್ರಮುಖವಾದುದ್ದಾಗಿದೆ. ಯೂರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಇದೇ ಹೆಸರು ಮತ್ತು ಸಂಸ್ಕೃತಿಯನ್ನು ಬಳಸಿಕೊಂಡು ಹಲವು ದೇವಾಲಯಗಳನ್ನು ನಿರ್ಮಿಸಲಾಗಿದೆ. ಈ ದೇಗುಲದಲ್ಲಿ ಭಗವಂತ ಮುರುಘನ ಮೂರ್ತಿಯನ್ನು ಪೂಜಿಸಲಾಗುತ್ತದೆ. ಈ ಮೂರ್ತಿಯನ್ನು 10ನೇ ಶತಮಾನದಲ್ಲಿ ಚೋಳರ ರಾಣಿ ಸೆಂಬಿಯನ್ ಮಹಾದೇವಿ ಉಡುಗೊರೆಯಾಗಿ ನೀಡಿದ್ದಳು ಎಂಬ ಐತಿಹ್ಯವಿದೆ.
ಬಳಿಕ, ಟ್ರಿಂಕೋಮಲಿಯಲ್ಲಿರುವ ತಿರುಕೋನೇಶ್ವರಂ ದೇವಸ್ಥಾನಕ್ಕೂ ಭೇಟಿ ನೀಡಿದ್ದರು.