ತಿರುವನಂತಪುರಂ: ರಾಜ್ಯದ ಪಡಿತರ ಅಂಗಡಿಗಳಿಗೆ ಪ್ರತಿತಿಂಗಳ ಒಂದನೇ ತಾರೀಖಿನಂದು ಅಥವಾ ಮೊದಲ ಕೆಲಸದ ದಿನ ರಜೆ ಇರಲಿದೆ. ಈ ಬಗ್ಗೆ ಆಹಾರ ಸಚಿವ ಜಿ.ಆರ್.ಅನಿಲ್ ಪ್ರಕಟಿಸಿದ್ದಾರೆ.
ಹೊಸ ನಿಯಮ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ಪಡಿತರ ವರ್ತಕರ ಸಂಘಟನೆಗಳ ಬೇಡಿಕೆ ಆಧರಿಸಿ ಹೊಸ ಕ್ರಮ ಕೈಗೊಳ್ಳಲಾಗಿದೆ.
ಸದ್ಯ ಭಾನುವಾರ ಮತ್ತು ರಜಾ ದಿನಗಳಲ್ಲಿ ಮಾತ್ರ ಪಡಿತರ ಅಂಗಡಿಗಳು ಮುಚ್ಚಿರುತ್ತದೆ. ಒಂದು ತಿಂಗಳ ಪಡಿತರ ವಿತರಣೆ ಮುಗಿದ ನಂತರ ಮತ್ತು ಮುಂದಿನ ತಿಂಗಳ ವಿತರಣೆ ಪ್ರಾರಂಭವಾಗುವ ಮೊದಲು ಇ-ಪಿಒಎಸ್ ವ್ಯವಸ್ಥೆಯಲ್ಲಿ ಪಡಿತರ ಹಂಚಿಕೆಗೆ ವ್ಯವಸ್ಥೆ(ಸೆಟ್ಟಿಂಗ್) ಮಾಡಬೇಕಾಗುತ್ತದೆ.
ಈ ಕಾರಣದಿಂದಾಗಿ, ಪ್ರಸ್ತುತ ತಿಂಗಳ ಮೊದಲ ಕೆಲಸದ ದಿನ ಸಂಜೆ ಮಾತ್ರ ತೆರೆಯಲ್ಪಡುತ್ತಿದೆ. ಇದೇ ಸಂದರ್ಭದಲ್ಲಿ ಮೊದಲ ಕೆಲಸದ ದಿನ ರಜೆ ನೀಡುವಂತೆ ಮನವಿ ಮಾಡಲಾಗಿತ್ತು. ಇನ್ನುಮುಂದೆ ಮೊದಲ ಕೆಲಸದ ದಿನ ಪೂರ್ತಿ ರಜೆ ಇರಲಿದೆ.