ಮಾಲಿವುಡ್ನ ಮೆಗಾಸ್ಟಾರ್ ಮಮ್ಮೂಕಾ ಎಂದು ವ್ಯಾಪಕವಾಗಿ ಕರೆಯಲ್ಪಡುವ ನಟ ಮಮ್ಮುಟ್ಟಿ ಇತ್ತೀಚೆಗಷ್ಟೇ 'ಕಣ್ಣೂರು ಸ್ಕ್ವಾಡ್' ಚಿತ್ರದ ಮುಖೇನ ಸಿನಿಪ್ರೇಕ್ಷಕರ ಮುಂದೆ ಹಾಜರಾಗಿದ್ದರು. ಚಿತ್ರವು ಚಿತ್ರತಂಡ ನಿರೀಕ್ಷಿಸಿದಂತೆ ಚಿತ್ರಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ಕೂಡ ಗಳಿಸಿತು.

ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಈಗ ತಮ್ಮ ಮುಂದಿನ 'ಕಾತಲ್: ದಿ ಕೋರ್' ಜಾಗತಿಕ ರಿಲೀಸ್ಗೆ ಸಜ್ಜಾಗಿದೆ. ಆದ್ರೆ, ಕೆಲವೆಡೆ ಈ ಚಿತ್ರ ತಮ್ಮಲ್ಲಿ ಬಿಡುಗಡೆಯಾಗುವುದು ಬೇಡ ಎಂದು ನಿಷೇಧ ಹೇರಿರುವ ಸಂಗತಿ ಇದೀಗ ಮುನ್ನೆಲೆಗೆ ಬಂದಿದೆ.
ಚಿತ್ರವು ಇದೇ ನವೆಂಬರ್ 23, 2023 ರಂದು ಜಾಗತಿಕ ಬಿಡುಗಡೆಗೆ ಸಕಲ ತಯಾರಿಗಳನ್ನು ಮಾಡಿಕೊಂಡಿದೆ. ಆದ್ರೆ, ಕತಾರ್ ಮತ್ತು ಕುವೈತ್‌ನಲ್ಲಿ ಈ ಸಿನಿಮಾದ ರಿಲೀಸ್ಗೆ ನಿಷೇಧವನ್ನು ಹೇರಲಾಗಿದೆ. ಸಿನಿಮಾದಲ್ಲಿ ಸಲಿಂಗಕಾಮಿ ವಿಷಯವನ್ನು ಒಳಗೊಂಡಿರುವ ಕಾರಣದಿಂದ ಕತಾರ್ ಮತ್ತು ಕುವೈತ್‌ನಲ್ಲಿ ಚಿತ್ರದ ಬಿಡುಗಡೆಯಾಗುವುದಿಲ್ಲ ಎಂದು ಇತ್ತೀಚಿನ ವರದಿ ತಿಳಿಸಿದೆ.
ಚಿತ್ರದಲ್ಲಿ ಮಮ್ಮುಟ್ಟಿ ಸಲಿಂಗಕಾಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಇದೀಗ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ. ಈ ಹಿನ್ನಡೆಯು ಚಿತ್ರದ ವ್ಯವಹಾರಕ್ಕೆ ಮಹತ್ವದ ಸವಾಲಾಗಿದ್ದು, ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
ಸಿನಿಮಾದಲ್ಲಿ ಮಮ್ಮುಟ್ಟಿಗೆ ನಾಯಕಿಯಾಗಿ ನಟಿ ಜ್ಯೋತಿಕಾ ಕಾಣಿಸಿಕೊಂಡಿದ್ದು, ಒಂದು ದಶಕದ ಬಳಿಕ ಮಲಯಾಳಂ ಚಿತ್ರರಂಗಕ್ಕೆ ಹಿಂತಿರುಗಿದ್ದಾರೆ. 'ದಿ ಗ್ರೇಟ್ ಇಂಡಿಯನ್ ಕಿಚನ್' ಖ್ಯಾತಿಯ ಜೋ ಬೇಬಿ ನಿರ್ದೇಶನದ ಈ ಚಿತ್ರವನ್ನು ಮಮ್ಮುಟ್ಟಿ ಕಂಪೆನಿ ಮತ್ತು ವೇಫೇರರ್ ಫಿಲ್ಮ್ಸ್ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಿಸಲಾಗಿದೆ. ಚಿತ್ರಕ್ಕೆ ಮ್ಯಾಥ್ಯೂಸ್ ಪುಲಿಕನ್ ಸಂಗೀತ ಸಂಯೋಜಿಸಿದ್ದಾರೆ.