ಕಾಸರಗೋಡು: ಎರಡು ವರ್ಷದೊಳಗೆ ರಾಜ್ಯದ ಎಲ್ಲ ದನಗಳನ್ನು ವಿಮಾ ಯೋಜನೆಗೆ ಸೇರಿಸುವುದರ ಜತೆಗೆ ಹೊರ ರಾಜ್ಯಗಳಿಂದ ಬರುವ ಹಾಲನ್ನು ಪರಿಶೀಲಿಸಿ ಕಲಬೆರಕೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ಸಚಿವೆ ಜೆ.ಚಿಂಚುರಾಣಿ ತಿಳಿಸಿದ್ದಾರೆ.
ಅವರು ಕಾಸರಗೋಡು ಉದುಮ ನಾಲಾಂಆದುಕ್ಕಲ್‍ನಲ್ಲಿ ಹಾಲು ಅಭಿವೃದ್ಧಿ ಇಲಾಖೆ ವತಿಯಿಂದ 'ನಿರ್ಮಲ ಹಾಲು ಸಂಗ್ರಹಣಾ ಕೊಠಡಿ' ಯೋಜನೆಯಡಿ ಉದುಮ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಸಚಿವರು ಮಾತನಾಡಿದರು.
49 ವರ್ಷಗಳ ಹಿಂದೆ ಪ್ರಾರಂಭವಾದ ಉದುಮ ಹಾಲು ಒಕ್ಕೂಟವು ದಿನಕ್ಕೆ 100 ಲೀಟರ್ ಹಾಲು ಸಂಗ್ರಹಿಸುವ ಮೂಲಕ ಆರಂಭಗೊಂಡ ಸಂಘ ಇಂದು 1200 ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ರಾಜ್ಯ ಸರ್ಕಾರವು ಹೈನುಗಾರರಿಗೆ ಹಲವಾರು ಯೋಜನೆಗಳು ಮತ್ತು ಸಬ್ಸಿಡಿಗಳನ್ನು ನೀಡುತ್ತದೆ ಎಂದು ತಿಳಿಸಿದರು. ಉದುಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು
2022-23ನೇ ಸಾಲಿನಲ್ಲಿ ಅತಿ ಹೆಚ್ಚು ಹಾಲು ಪೂರೈಸಿದ ಯುವ ರೈತ ಅನಿಲ್ ಕುಮಾರ್ ವಿ ಹಾಗೂ ಪ್ರಗತಿಪರ ಕೃಷಿಕ ಮಹಿಳೆ ಎಂ.ಆರಿಫಾಬಿ ಅವರನ್ನು ಸಚಿವರು ಸನ್ಮಾನಿಸಿದರು. ಮಿಲ್ಮಾ ಅಧ್ಯಕ್ಷ ಕೆ.ಎಸ್.ಮಣಿ ಹಾಲು ಶೀಥಲೀಕರಣ ಕೇಂದ್ರವನ್ನು ಉದ್ಘಾಟಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ಅಭಿವೃದ್ಧಿ ವ್ಯವಹಾರಗಳ ಸಮಿತಿಅಧ್ಯಕ್ಷೆ ಗೀತಾ ಕೃಷ್ಣನ್ ಬಳಗದ ಆರಂಭಿಕ ರೈತರನ್ನು ಸನ್ಮಾನಿಸಿದರು. . ಜಿಲ್ಲಾ ಡೈರಿ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹೇಶ್ ನಾರಾಯಣನ್ ವರದಿ ಮಂಡಿಸಿದರು.