ಬದಿಯಡ್ಕ : ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ, ಸುಕ್ಷೇತ್ರ ಮೈಲಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವಿಜಯನಗರ/ಬಳ್ಳಾರಿ, ಹೂವಿನ ಹಡಗಲಿ ತಾಲ್ಲೂಕು ಪಂಚಾಯಿತಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಮತ್ತು ಮೈಲಾರ ಗ್ರಾಮ ಪಂಚಾಯಿತಿನ ಜಂಟಿ ಆಶ್ರಯದಲ್ಲಿ ನ.27ರಂದು ಹಾವೇರಿ ಜಿಲ್ಲೆಯ ಮೈಲಾರ ಶರಣ ಜಯಪ್ರಕಾಶ ನಾರಾಯಣ ಕಲಾ ಮಂದಿರದಲ್ಲಿ ನಡೆಯುವ ಕರ್ನಾಟಕ ಸಂಭ್ರಮ-50 ಹಾಗೂ ಗ್ರಾಮೀಣ ಕನ್ನಡ ನುಡಿಹಬ್ಬ-2023ರಲ್ಲಿ ನೀಡಲಾಗುವ ಮೈಲಾರ ಬಸವಲಿಂಗ ಶರಣಶ್ರೀ ಗೌರವ ಪ್ರಶಸ್ತಿಗೆ ಕಾಸರಗೋಡಿನ ವೈದ್ಯೆ, ಸಾಹಿತಿ, ಸಂಘಟಕಿ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆಯಾಗಿದ್ದಾರೆ. ಇವರು ಸಾಹಿತ್ಯ, ಸಾಂಸ್ಕøತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವಾಣಿಶ್ರೀ ಅವರು ಅನೇಕ ವರ್ಷಗಳಿಂದ ಕಾಸರಗೋಡಿನಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘವನ್ನು ಸ್ಥಾಪಿಸಿ, ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ನೂರಾರು ಕಲಾವಿದರಿಗೆ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಅನೇಕ ಬಾಲ ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹಿಸಿದ್ದಾರೆ. ಈಗಾಗಲೇ ಅನೇಕ ಸಾಹಿತ್ಯ ಸಮ್ಮೇಳನದಲ್ಲಿ ಕವನವಾಚನ ಸಹಿತ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿ ಅನೇಕ ಸನ್ಮಾನಗಳನ್ನು ಸ್ವೀಕರಿಸಿದ್ದಾರೆ.