ನವದೆಹಲಿ: ಡೀಪ್ ಫೇಕ್ ನಂತಹ ಆಕ್ಷೇಪಾರ್ಹ ವಿಡಿಯೊಗಳಿಂದ ನೊಂದಿದ್ದರೆ ಐಟಿ ನಿಯಮಗಳ ಉಲ್ಲಂಘನೆ ಮಾಡಿದ ಆರೋಪದಲ್ಲಿ ಸೋಷಿಯಲ್ ಮೀಡಿಯಾ ವೇದಿಕೆಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಸರ್ಕಾರ ನಾಗರಿಕರಿಗೆ ಸಹಾಯ ಮಾಡಲಿದೆ.
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನಾಗರಿಕರಿಗೆ ದೂರು ಸಲ್ಲಿಸುವ ವೇದಿಕೆಯನ್ನು((Meity) ಅಭಿವೃದ್ಧಿಪಡಿಸಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ, ಇದರಲ್ಲಿ ಬಳಕೆದಾರರು ಸೋಷಿಯಲ್ ಮೀಡಿಯಾ ವೇದಿಕೆಗಳ ಮೂಲಕ ಐಟಿ ನಿಯಮ ಉಲ್ಲಂಘನೆಯ ಬಗ್ಗೆ ತಿಳಿಸಬಹುದು.
ಐಟಿ ನಿಯಮಗಳ ಉಲ್ಲಂಘನೆಯ ಬಗ್ಗೆ ಬಳಕೆದಾರರಿಗೆ ಸುಲಭವಾಗಿ ತಿಳಿಸಲು ಮತ್ತು ಎಫ್‌ಐಆರ್‌ಗಳನ್ನು ದಾಖಲಿಸಲು ಸಹಾಯ ಮಾಡಲು ಮೇಟಿ ವೇದಿಕೆ ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದರು.

ಸಾಮಾಜಿಕ ಜಾಲತಾಣಗಳ ವೇದಿಕೆಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐಟಿ ನಿಯಮಗಳ ಉಲ್ಲಂಘನೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದರು.
ಇಲ್ಲಿ ಮಧ್ಯವರ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಅವರು ಡೀಪ್ ಫೇಕ್ ವಿಡಿಯೊಕ್ಕೆ ಸಂಬಂಧಿಸಿದಂತಹ ವಿಷಯಗಳನ್ನು ಎಲ್ಲಿಂದ ಬಂದಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿದರೆ ವಿಷಯವನ್ನು ಪೋಸ್ಟ್ ಮಾಡಿದ ಘಟಕದ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಸಚಿವರು ಹೇಳಿದರು.