ಕೋಝಿಕ್ಕೋಡ್: ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಪ್ರಕರಣದಲ್ಲಿ ನಟ ಹಾಗೂ ಬಿ.ಜೆ.ಪಿ. ನಾಯಕ ಸುರೇಶ್ ಗೋಪಿ ಅವರನ್ನು ಪ್ರಶ್ನಿಸಿ ಬಂಧಿಸದೆ ಬಿಡುಗಡೆಮಾಡಲಾಗಿದೆ.
ಬದಲಾಗಿ ಮತ್ತೊಮ್ಮೆ ಹಾಜರಾಗುವಂತೆ ನೋಟಿಸ್ ನೀಡಿ ಬಿಡುಗಡೆಗೊಳಿಸಲಾಯಿತು. ಸುರೇಶ್ ಗೋಪಿ ಅವರು ನಡಕಾವ್ ಪೋಲೀಸ್ ಠಾಣೆಯಲ್ಲಿ ವಿಚಾರಣೆಗೆ ಇಂದು ಹಾಜರಾಗಿದ್ದರು.
ವಿಚಾರಣೆ ಮುಗಿಸಿ ಹೊರಬಂದ ಸುರೇಶ್ ಗೋಪಿ ಮಾಧ್ಯಮದವರೊಂದಿಗೆ ಮಾತನಾಡಿ, ಪೋಲೀಸ್ ಠಾಣೆ ಆವರಣದಲ್ಲಿ ಬೆಂಬಲ ಸೂಚಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಿದರು. ನಾಯಕರ ಹೆಸರು ಹಿಡಿದು ಧನ್ಯವಾದ ಹೇಳಿದರು. ಹಾಜರಾಗುವಂತೆ ನೋಟಿಸ್ ನೀಡಿದರೆ ಮತ್ತೊಮ್ಮೆ ಹಾಜರಾಗುವುದಾಗಿ ಸುರೇಶ್ ಗೋಪಿ ಪರ ವಕೀಲರು ತಿಳಿಸಿದ್ದಾರೆ. ಸುರೇಶ್ ಗೋಪಿ ವಿರುದ್ಧ 354 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಗೋಪಿ ಅವರಿಗೆ ಬೆಂಬಲ ಸೂಚಿಸಿ ಠಾಣೆಯ ಮುಂಭಾಗ ಬಿಜೆಪಿಯ ಹಿರಿಯ ಮುಖಂಡರು ಮತ್ತು ಇತರರು ಘೋಷಣೆಗಳನ್ನು ಕೂಗಿದರು. ಸುರೇಶ್ ಗೋಪಿ ಠಾಣೆಗೆ ಬರುವ ಮುನ್ನವೇ ಆಂಗ್ಲ ಚರ್ಚ್ ಪ್ರದೇಶದಿಂದ ನಾಡಕ್ಕಾವ್ ನ ಠಾಣೆಯವರೆಗೆ ಬಿಜೆಪಿಯ ರ್ಯಾಲಿಯನ್ನು ಪೋಲೀಸರು ತಡೆದರು. ನಂತರ ಬಿಜೆಪಿ ಕಾರ್ಯಕರ್ತರು ಪೋಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ನಡಕಾವು ಮಂಡಲ ಸಮಿತಿ ನೇತೃತ್ವದಲ್ಲಿ ನಡೆದ ರ್ಯಾಲಿಯಲ್ಲಿ ಮಹಿಳೆಯರು ಸೇರಿದಂತೆ ಸುಮಾರು 500 ಕಾರ್ಯಕರ್ತರು ‘ಕೋಝಿಕೋಡ್ ವಿತ್ ಎಸ್.ಜಿ.’ ಎಂಬ ಫಲಕದೊಂದಿಗೆ ಭಾಗವಹಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಉಪಾಧ್ಯಕ್ಷೆ ಶೋಭಾ ಸುರೇಂದ್ರನ್, ಎಂ.ಟಿ.ರಮೇಶ್, ಪಿ.ಕೆ.ಕೃಷ್ಣದಾಸ್ ಜಿಲ್ಲಾಧ್ಯಕ್ಷ ವಿ.ಕೆ. ಸಜೀವನ್ ಮುಂತಾದ ನಾಯಕರು ಇದ್ದರು. ಬೆಳಗ್ಗೆ 10.30ಕ್ಕೆ ಠಾಣೆಗೆ ಬರುವಂತೆ ಸುರೇಶ್ ಗೋಪಿಗೆ ಪೋಲೀಸರು ಸೂಚಿಸಿದ್ದರು. ಬಳಿಕ ಠಾಣೆ ವ್ಯಾಪ್ತಿಯಲ್ಲಿ ಪೆÇಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಕೋಝೀಕ್ಕೋಡ್ ನ ಪತ್ರಕರ್ತರು ನಗರ ಪೋಲೀಸ್ ಆಯುಕ್ತರಿಗೆ ನೀಡಿದ ದೂರಿನ ಮೇರೆಗೆ ಸುರೇಶ್ ಗೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಖಾಸಗಿ ಹೊಟೇಲ್‍ನಲ್ಲಿ ಪತ್ರಕರ್ತರೊಬ್ಬರ ಬಳಿ ಅನುಚಿತವಾಗಿ ವರ್ತಿಸಿದ ಪ್ರಕರಣ ಇದಾಗಿದೆ.