HEALTH TIPS

ದಡಾರ ಲಸಿಕೆ: ಡಬ್ಲ್ಯುಎಚ್‌ಒ ಲೆಕ್ಕ ಅಲ್ಲಗಳೆದ ಕೇಂದ್ರ

              ವದೆಹಲಿ: ದಡಾರ ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆಯುವುದನ್ನು ತಪ್ಪಿಸಿಕೊಂಡ ಮಕ್ಕಳ ಸಂಖ್ಯೆ ಎಷ್ಟು ಎಂಬ ವಿಚಾರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಹೇಳಿಕೆಯು ವಿಶ್ವ ಆರೋಗ್ಯ ಸಂಸ್ಥೆ - ಸಿಡಿಸಿ ಹೇಳಿಕೆಗಿಂತ ಭಿನ್ನವಾಗಿದೆ.

               ಸಚಿವಾಲಯದ ಹೇಳಿಕೆ ಪ್ರಕಾರ 2022-23ರಲ್ಲಿ 21,310 ಮಕ್ಕಳು ಮಾತ್ರ ದಡಾರ ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದಿಲ್ಲ.

             ಆದರೆ ಡಬ್ಲ್ಯುಎಚ್‌ಒ-ಸಿಡಿಸಿ ವರದಿ ಪ್ರಕಾರ ಅಂದಾಜು 11 ಲಕ್ಷ ಮಕ್ಕಳು ಈ ಲಸಿಕೆ ಪಡೆದಿಲ್ಲ. ಸಚಿವಾಲಯದ ಹೇಳಿಕೆಯು ಡಬ್ಲ್ಯುಎಚ್‌ಒ-ಸಿಡಿಸಿ ವರದಿ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ.

ಡಬ್ಲ್ಯುಎಚ್‌ಒ-ಸಿಡಿಸಿ ವರದಿ ಪ್ರಕಾರ, 2022ರಲ್ಲಿ ಜಾಗತಿಕವಾಗಿ 2.2 ಕೋಟಿ ಮಕ್ಕಳು ದಡಾರ ನಿರೋಧಕ ಲಸಿಕೆಯ ಮೊದಲ ಡೋಸ್ ಪಡೆದಿಲ್ಲ. ಈ ಪೈಕಿ ಅಂದಾಜು 11 ಲಕ್ಷ ಮಕ್ಕಳು ಭಾರತದಲ್ಲಿಯೇ ಇದ್ದಾರೆ. ಇದು ಅಂದಾಜು ಲೆಕ್ಕ ಆಧರಿಸಿ ಅಂಕಿ-ಅಂಶ.

                 ಸಚಿವಾಲಯವು ತನ್ನ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯನ್ನು ಆಧರಿಸಿ, ಅರ್ಹ ಮಕ್ಕಳ ಪೈಕಿ 2022-23ರಲ್ಲಿ 21,310 ಮಕ್ಕಳು ಮಾತ್ರ ಈ ಲಸಿಕೆ ಪಡೆದಿಲ್ಲ ಎಂದು ಹೇಳಿದೆ. 'ಡಬ್ಲ್ಯುಎಚ್‌ಒ-ಸಿಡಿಸಿ ವರದಿಯು ನಿಜವಾದ ಚಿತ್ರಣವನ್ನು ನೀಡುತ್ತಿಲ್ಲ' ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

                 ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆಯ ವಿಚಾರದಲ್ಲಿ ಡಬ್ಲ್ಯುಎಚ್‌ಒ ನೀಡಿದ್ದ ಅಂಕಿ-ಅಂಶವನ್ನು ಕೂಡ ಕೇಂದ್ರ ಸರ್ಕಾರವು ಈ ಹಿಂದೆ ಅಲ್ಲಗಳೆದಿತ್ತು. ದಡಾರ ಲಸಿಕೆ ಪಡೆಯದ ಮಕ್ಕಳ ಸಂಖ್ಯೆಯನ್ನು ಅಂದಾಜಿಸಿದ ತಂಡಕ್ಕೆ ಪ್ರತಿಕ್ರಿಯೆ ಕೋರಿ 'ಪ್ರಜಾವಾಣಿ' ಕೇಳಿದ ಪ್ರಶ್ನೆಗೆ ಉತ್ತರ ದೊರೆತಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries