ನವದೆಹಲಿ: ಭಾರತದಲ್ಲಿನ ಸ್ಮಾರ್ಟ್ಸಿಟಿಗಳಿಗಾಗಿ ಫ್ರಾನ್ಸ್ ಭಾರಿ ಮೊತ್ತದ ಸಾಲವನ್ನು ಘೋಷಣೆ ಮಾಡಿದೆ. ಫ್ರಾನ್ಸ್ ಸರ್ಕಾರ ಈ ನಿಟ್ಟಿನಲ್ಲಿ ಭಾರತ ಸರ್ಕಾರ ಮತ್ತು ಫ್ರೆಂಚ್ ಡೆವೆಲಪ್ಮೆಂಟ್ ಏಜೆನ್ಸಿ (ಎಎಫ್ಡಿ) ಜೊತೆಗಿನ ಒಪ್ಪಂದದ ಕುರಿತು ಇಂದು ಘೋಷಣೆ ಮಾಡಿದೆ.

ಸಿಐಟಿಐಐಎಸ್ 1 ಕಾರ್ಯಕ್ರಮದಡಿ ಭಾರತ ಸರ್ಕಾರ ದೇಶದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಬೆಂಬಲವಾಗಿ ಫ್ರಾನ್ಸ್ ಈ ಸಾಲದ ನೆರವನ್ನು ಘೋಷಣೆ ಮಾಡಿದೆ.
2018 ರಲ್ಲಿ ಪ್ರಾರಂಭಿಸಲಾದ CITIIS 1.0 ಕಾರ್ಯಕ್ರಮವು ಇಲ್ಲಿಯವರೆಗೆ 12 ನಗರ-ಮಟ್ಟದ ಯೋಜನೆಗಳಿಗೆ ಪ್ರಯೋಜನವನ್ನು ನೀಡಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಮತ್ತಷ್ಟು ಪ್ರೋತ್ಸಾಹದ ನಿಟ್ಟಿನಲ್ಲಿ ಈ ಘೋಷಣೆಯನ್ನು ಮಾಡಿದೆ.
ಫ್ರಾನ್ಸ್ , ಟೀಮ್ ಯುರೋಪ್, ಈ ಕಾರ್ಯಕ್ರಮವನ್ನು ಬೆಂಬಲಿಸಲು ಹೆಮ್ಮೆಪಡುತ್ತದೆ, ಇದು ಭಾರತದಲ್ಲಿ ಸ್ವಚ್ಛ, ಹಸಿರು ಮತ್ತು ಹೆಚ್ಚು ಸುಸ್ಥಿರ ನಗರಗಳನ್ನು ನಿರ್ಮಿಸುವಲ್ಲಿ ಪ್ರಮುಖವಾಗಿದೆ ಎಂದು ಫ್ರಾನ್ಸ್ ತಿಳಿಸಿದೆ.