ಪೆರ್ಲ:ಉಚಿತ ಮೆಗಾ ವೈದ್ಯಕೀಯ ಶಿಬಿರ ಪೆರ್ಲ ಮರಾಟಿ ಬೋಡಿರ್ಂಗ್ ಹಾಲ್ ನಲ್ಲಿ ನಡೆಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ ಜೆ ಎಸ್ ಶಿಬಿರ ಉದ್ಘಾಟಿಸಿದರು..
ರೋಟರಿ ಕ್ಲಬ್ ಕಾಸರಗೋಡು,ಏನಾಪೆÇೀಯ ಡೀಮ್ಡ್ ಯೂನಿವರ್ಸಿಟಿ, ಐ ಎಂ ಎ ಕಾಸರಗೋಡು, ಎಣ್ಮಕಜೆ ಗ್ರಾಮಪಂಚಾಯಿತಿ, ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಪೆರ್ಲ, ಮರಾಟಿ ಮಹಿಳಾ ವೇದಿಕೆ ಪೆರ್ಲ, ಮರಾಟಿ ಚಾರಿಟೇಬಲ್ ಟ್ರಸ್ಟ್ ಪೆರ್ಲ ಸಂಘಟನೆಗಳ ಸಹಬಾಗಿತ್ವದಲ್ಲಿ ಶಿಬಿರ ಆಯೋಜಿಸಲಾಗಿತ್ತು.
ಯೇನಾಪೆÇೀಯ ಡೀಮ್ಡ್ ಯೂನಿವರ್ಸಿಟಿಯ ಕ್ಯಾನ್ಸರ್ ತಜ್ಞ ಡಾ. ರಾಜೇಶ್ ಕೃಷ್ಣ ಕ್ಯಾನ್ಸರ್ ರೋಗದ ನಿಯಂತ್ರಣ ಹಾಗೂ ಶಿಬಿರದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು. ರೋಟರಿ ಕ್ಲಬ್ ಕಾಸರಗೋಡು ಅಧ್ಯಕ್ಷ ಗೌತಮ್ ಭಕ್ತ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಸಿಸ್ಟೆಂಟ್ ಗವರ್ನರ್ ವಿಶಾಲ್ ಕುಮಾರ್ ಸಿ ಎ ಮುಖ್ಯ ಅತಿಥಿ ಯಾಗಿ ಭಾಗವಸಿದರು ಎಣ್ಮಕಜೆ ಗ್ರಾಪಂ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಗ್ರಾಪಂ ಸದಸ್ಯೆ ಉಷಾ, ಕಾಸರಗೋಡು ಐಎಂಎ ಪದಾಧಿಕಾರಿಗಳಾದ ಡಾ.ಖಾಸಿಂ, ಡಾ.ಜ್ಯೋತಿ ಎಸ್, ಪೆರ್ಲ ಶ್ರೀ ಶಾರದಾ ಶಾರದಾ ಮರಾಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಬಿ ಜಿ. ನಾಯ್ಕ್, ಶ್ರೀ ಶಾರದಾ ಮರಾಟಿ ಸಮಾಜ ಸೇವಾ ಸಂಘ ಅಧ್ಯಕ್ಷ ಬಾಲಕೃಷ್ಣ ನಾಯ್ಕ್, ಸಂಘಟನಾ ಕಾರ್ಯದರ್ಶಿ ಡಾ. ಶಿವ ನಾಯ್ಕ್, ರೊಟೇರಿಯನ್‍ಗಳಾದ ಕೆ ಎನ್ ಶೆಟ್ಟಿ, ರಾಧಾಕೃಷ್ಣನ್, ದಿನೇಶ್ ಎಂ ಟಿ, ಜಯಪ್ರಕಾಶ್, ಮುರಳಿಧರ ಕಾಮತ್, ದಯಾನಂದ ಪಟೇಲ್, ಪುಷ್ಪ ಅಮೆಕ್ಕಳ ಉಪಸ್ಥಿತರಿದ್ದರು.
ಶಶಿಕಲಾ ಪಟೇಲ್ ಪ್ರಾಥನೆ ಹಡಿದರು. ನಿಯುಕ್ತ ರೋಟರಿ ಅಧ್ಯಕ್ಷ ಡಾ. ಬಿ ನಾರಾಯಣ ನಾಯ್ಕ್ ಸ್ವಾಗತಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾರಿಜಾ ಅಡ್ಕಸ್ಥಳ ವಂದಿಸಿದರು. ನೂರ್ಯವತ್ತಕ್ಕೂ ಹೆಚ್ಷು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ದಂತ ರೋಗ, ಸ್ತ್ರೀ ರೋಗ, ಕ್ಯಾನ್ಸರ್, ನೇತ್ರ ರೋಗ, ಜನರಲ್ ಮೆಡಿಸಿನ್,ಮಕ್ಕಳ ವಿಭಾಗ,ಮಾನಸಿಕ ರೋಗ ವಿಭಾಗ,ಬಿಪಿ, ಮಧುಮೇಹ ತಪಾಸಣೆ, ಏನಾಪೆÇೀಯ ಹೆಲ್ತ್ ಕಾರ್ಡ್, ಫಾರ್ಮಸಿ ಇತ್ಯಾದಿ ಸೌಕರ್ಯ ಶಿಬಿರದಲ್ಲಿ ಆಯೋಜಿಸಲಾಗಿತ್ತು.