HEALTH TIPS

ಸಂಘಟನೆಗಳ ಮೂಲಕ ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯ: ಕವಿ - ಸಾಹಿತಿ ಡಾ. ವಸಂತಕುಮಾರ ಪೆರ್ಲ ಹೇಳಿಕೆ


              ಮಂಗಳೂರು: ಸಾಹಿತ್ಯವು ಮನಸ್ಸನ್ನು ವಿಕಾಸಗೊಳಿಸಿ ಬುದ್ದಿಯನ್ನು ಬಲಗೊಳಿಸುವ ಒಂದು ಕಲೆ. ಸಾಹಿತ್ಯ
ಸಂಘಟನೆಗಳ ಮೂಲಕ ಒಂದು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಅರಿವು ವಿಸ್ತಾರವಾದಂತೆ
ಸಮಾಜದಲ್ಲಿರುವ ಅಪನಂಬಿಕೆಗಳು ದೂರವಾಗಿ ವ್ಯಕ್ತಿ ವ್ಯಕ್ತಿಗಳೊಳಗೆ ಸುಮಧುರ ಬಾಂಧವ್ಯ ಏರ್ಪಡಲು
ಸಾದ್ಯವಾಗುತ್ತದೆ ಎಂದು ಹಿರಿಯ ಕವಿ ಸಾಹಿತಿಗಳಾದ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.

              ಅಂಡಾಲದ ಧರ್ಮಚಾವಡಿಯಲ್ಲಿ ಕವಿ ಅಂಡಾಲ ಗಂಗಾಧರ ಶೆಟ್ಟರ ಸಹಸ್ರ ಚಂದ್ರದರ್ಶನ ಶಾಂತಿಹೋಮ, ಅಂಡಾಲ ಅಭಿನಂದನ ಮತ್ತು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.

                ಅಂಡಾಲ ಗಂಗಾಧರ ಶೆಟ್ಟಿಯವರು ಬ್ಯಾಂಕ್ ಉದ್ಯೋಗಿಯಾಗಿ ವೃತ್ತಿಜೀವನ ಆರಂಭಿಸಿ ಅನಂತರ ಸಾಹಿತ್ಯ ಮತ್ತು
ಧಾರ್ಮಿಕ ಕ್ಷೇತ್ರದತ್ತ ಆಕರ್ಷಿತರಾಗಿ ಕುಟುಂಬಸ್ಥರ ಮತ್ತು ಹತ್ತು ಸಮಸ್ತರ ಸಹಕಾರದೊಂದಿಗೆ ಅಂಡಾಲಬೀಡಿನ
ಚಿತ್ರಣವನ್ನು ಬದಲಾಯಿಸಿದರು. ತನ್ನೊಂದಿಗೆ ಊರವರ ಬದುಕನ್ನು ಹಸನುಗೊಳಿಸಿದರು ಎಂದು ಡಾ. ಪೆರ್ಲ ಅವರು
ಹೇಳಿದರು.


                ತನ್ನ ಬದುಕಿಗೆ ಕೊಡುಗೆ ನೀಡಿದ ಮಹನೀಯರನ್ನು ಮತ್ತು ಅಂಡಾಲದ ಏಳಿಗೆಗೆ ಪಟ್ಟ ಪರಿಶ್ರಮವನ್ನು ಗಂಗಾಧರ
ಶೆಟ್ಟಿಯವರು ಸ್ಮರಿಸಿಕೊಂಡರು.

                ಕವಿಗೋಷ್ಠಿಯಲ್ಲಿ ಕವಿಗಳಾದ ಶಾರದಾ ಎಸ್. ಶೆಟ್ಟಿ, ಎನ್. ಸುಬ್ರಾಯ ಭಟ್, ರವಿರಾಜ ಎಸ್., ಪ್ರಶಾಂತಿ ಶೆಟ್ಟಿ
ಇರುವೈಲು, ವಿಜಯಲಕ್ಷ್ಮಿ ಶ್ಯಾನಭೋಗ್, ಅಶೋಕ್ ಎನ್. ಕಡೇಶಿವಾಲಯ, ರಾಜೇಂದ್ರ ಕೇದಿಗೆ, ಸದಾನಂದ ನಾರಾವಿ,
ಬದ್ರುದ್ದೀನ್ ಕೂಳೂರು ಮತ್ತು ಅಂಡಾಲ ಗಂಗಾಧರ ಶೆಟ್ಟಿ ಸ್ವರಚಿತ ಕವನಗಳನ್ನು ವಾಚಿಸಿದರು.

                ಕಾರ್ಯಕ್ರಮದ ಆರಂಭದಲ್ಲಿ ಜ್ಯೋತಿಷಿ ಅಂಡಾಲ ಜಗದೀಶ ಭಟ್ ಧರ್ಮದೈವಗಳ ಮುಂದೆ ಜ್ಯೋತಿ ಬೆಳಗಿಸಿ
ಕಾರ್ಯಕ್ರಮ ಉದ್ಘಾಟಿಸಿ ಶುಭಾಶಯದ ಮಾತುಗಳನ್ನು ಆಡಿದರು. ಆನಂತರ ಜಗದೀಶ ಶಿವಪುರ ಭಾವಗೀತೆಗಳನ್ನು
ಹಾಡಿದರು. ಶತಾಯುಷಿ ಮತ್ತು ಪ್ರಶಸ್ತಿ ವಿಜೇತ ಶಿಕ್ಷಕ ಮೂಡಬಿದಿರೆಯ ಸೀತಾರಾಮ ಶೆಟ್ಟಿಯವರನ್ನು ಈ
ಸಂದರ್ಭದಲ್ಲಿ ಸನ್ಮಾನಿಸಲಾಯಿತು.


              ಆಗಮ ಪೆರ್ಲ ಪ್ರಾರ್ಥನೆ ಹಾಡಿದರು. ರೆಹಮಾನ್ ಖಾನ್ ಕುಂಜತ್ ಬೈಲು ಕಾರ್ಯಕ್ರಮ ನಿರೂಪಿಸಿದರು. ಅಂಡಾಲ
ಗಂಗಾಧರ ಶೆಟ್ಟಿಯವರು ಸ್ವಾಗತಿಸಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries