ಮಂಜೇಶ್ವರ : ಇತ್ತೀಚೆಗೆ ಕುಂಜತ್ತೂರಿನ ಸರ್ಕಾರಿ ಉನ್ನತ ಪ್ರೌಢ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವÀದಲ್ಲಿ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸಾಧನೆಗೈದು ಶಾಲೆಗೆ ಕೀರ್ತಿ ತಂದಿರುವರು.
ವೃತ್ತಿ ಪರಿಚಯ ಮೇಳ ವಿಭಾಗದ ಶೀಟ್ ಮೆಟಲ್ ವರ್ಕ್ ನಲ್ಲಿ ಪ್ರಜ್ವಲ್ ಡಿ 'ಎ' ಗ್ರೇಡ್ ನೊಂದಿಗೆ ಪ್ರಥಮ, ಚೋಕ್ ನಿರ್ಮಾಣದಲ್ಲಿ ಚಾರ್ವಿನ್ ಆಳ್ವ 'ಎ' ಗ್ರೇಡ್ ನೊಂದಿಗೆ ಪ್ರಥಮ, ಗೆರಟೆಯ ಉತ್ಪನ್ನದಲ್ಲಿ ರೋಹಿತ್ ಕೆ 'ಎ' ಗ್ರೇಡ್ ನೊಂದಿಗೆ ದ್ವಿತೀಯ, ತಾಳೆ ಗರಿಯ ಉತ್ಪನ್ನದಲ್ಲಿ ಮೋಕ್ಷಿತ್ 'ಎ' ಗ್ರೇಡ್ ನೊಂದಿಗೆ ತೃತೀಯ, ಮೆಟಲ್ ಎಂಗ್ರೇವಿಂಗ್ ನಲ್ಲಿ ಅಂಕಿತ್ ರಾಜ್ 'ಎ' ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಎಂಬ್ರಾಯ್ಡರಿಯಲ್ಲಿ ಸಾನ್ವಿ ಶೆಟ್ಟಿ 'ಎ' ಗ್ರೇಡ್, ವಾಲಿಬಾಲ್ ನೆಟ್ ನಿರ್ಮಾಣದಲ್ಲಿ ತನ್ವಿ ಎಸ್ ಪೂಜಾರಿ 'ಎ' ಗ್ರೇಡ್, ಬಿದಿರಿನಲ್ಲಿ ಉತ್ಪನ್ನ ನಿರ್ಮಾಣದಲ್ಲಿ ವಂಶಿಕ್ 'ಎ' ಗ್ರೇಡ್, ಕ್ಲೇ ಮೋಡೆಲ್ ನಲ್ಲಿ ನಿಶ್ವಿತ್ 'ಎ' ಗ್ರೇಡ್ ಪಡೆದಿದ್ದಾರೆ.
ಗಣಿತ ಮೇಳ ವಿಭಾಗದ ನಂಬರ್ ಚಾರ್ಟ್ ಸ್ಪರ್ಧೆಯಲ್ಲಿ ಯದ್ವಿ ಕೆ ಶೆಟ್ಟಿ 'ಎ' ಗ್ರೇಡ್, ಸಮಾಜ ವಿಜ್ಞಾನ ವಿಭಾಗದ ಮೋಡೆಲ್ ನಲ್ಲಿ ದೃಶ ಕೆ ಮತ್ತು ದೀಕ್ಷ 'ಎ' ಗ್ರೇಡ್ ಪಡೆದಿದ್ದಾರೆ.
ಇವರಿಗೆ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘ, ಶತಮಾನೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಅಭಿನಂದನೆ ಸಲ್ಲಿಸಿದ್ದಾರೆ.