ತಿರುವನಂತಪುರಂ: ಕೇರಳ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಂದರ್ಭದಲ್ಲೂ ನವಕೇರಳ ಸಮಾವೇಶ ನಡೆಯುತ್ತಿರುವುದರಿಂದ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆ, ಪ್ರತಿಭಟನೆಗಳು ವ್ಯಕ್ತವಾಗುತ್ತಿವೆ.
ಜನತೆಯನ್ನು ಕೆರಳಿಸಿರುವ ಇನ್ನೊಂದು ವಿಚಾರವೆಂದರೆ ನವಕೇರಳ ಸಮಾವೇಶದ ಪ್ರಯಾಣಕ್ಕೆ ಬಳಸುವ ಬಸ್ಸಿಗೂ 1.05 ಕೋಟಿ ರೂ.ಬಳಸಿರುವುದು. ವಿವಾದಗಳು ಮತ್ತು ಟೀಕೆಗಳು ಭುಗಿಲೆದ್ದಾಗ ಸಿಪಿಎಂ ಇದಕ್ಕೆ ನೀಡುವ ವಿವರಣೆಯೂ ವಿಚಿತ್ರವಾಗಿದೆ. ನವಕೇರಳ ಸಮಾವೇಶದಂತಹ ಐತಿಹಾಸಿಕ ಘಟನೆ ವಿಶ್ವದಲ್ಲಿಯೇ ಮೊದಲು ಎಂಬ ಟೀಕೆಗೆ ಸಿಪಿಎಂ ಪ್ರತಿಕ್ರಿಯೆ ನೀಡಿದೆ. ಆಡಳಿತ ಯಂತ್ರ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ನವಕೇರಳ ಸಮಾವೇಶ ಉದಾಹರಣೆಯಾಗಿದೆ ಎಂದು ಸಿಪಿಎಂ ನಾಯಕ ಹಾಗೂ ಮಾಜಿ ಸಚಿವ ಎ.ಕೆ.ಬಾಲನ್ ಹೇಳುತ್ತಾರೆ.
ಪ್ರಯಾಣಕ್ಕೆ ಬಳಸಿದ ವಾಹನವನ್ನು ಟೆಂಡರ್ ಕರೆಯುವ ಮೂಲಕ ಮಾರಾಟ ಮಾಡಲು ಪ್ರಯತ್ನಿಸಿದರೆ, ಪ್ರಸ್ತುತ ಖರೀದಿಸಿದ ಬೆಲೆಯ ಎರಡು ಪಟ್ಟು ಬೆಲೆ ಲಭಿಸುವುದು. ಮ್ಯೂಸಿಯಂನಲ್ಲಿರುವ ವಾಹನವನ್ನು ನೋಡಲು ಲಕ್ಷಗಟ್ಟಲೆ ಜನ ಬರುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
“ವಿಶ್ವದ ಇತಿಹಾಸದಲ್ಲಿ ನಾವು ಈ ರೀತಿಯ ಘಟನೆಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲು, ವಾಸ್ತವವಾಗಿ, ಪ್ರತಿಪಕ್ಷಗಳು ಇದರಿಂದ ದೂರವಿರಬೇಕು ಎಂಬ ಹಂತಕ್ಕೆ ತಲುಪಿದೆ, ಸರ್ಕಾರ ಈ ಬಸ್ ನ್ನು ಮಾರಾಟ ಮಾಡಲು ನಿರ್ಧರಿಸಿದರೆ ಭಾರೀ ಆರ್ಥಿಕ ಲಾಭವಂಣತೂ ಆಗದಿರದು. ಈ ಕ್ಯಾಬಿನೆಟ್ ಬಸ್‍ಗೆ ಇಂದಿಗಿಂತ ದುಪ್ಪಟ್ಟು ಬೆಲೆ ಬರಲಿದೆ. 15 ವರ್ಷಗಳ ನಂತರ ಇದನ್ನು ಮ್ಯೂಸಿಯಂನಲ್ಲಿ ಇರಿಸÀಬೇಕು. ಕೇರಳದ ಮುಖ್ಯಮಂತ್ರಿ ಮತ್ತು ಸಚಿವರು ಸಾಗಿಸುವ ವಾಹನವಾಗಿರುವುದರಿಂದ ಇದನ್ನು ನೋಡಲು ಲಕ್ಷಾಂತರ ಜನರು ಬರುತ್ತಾರೆ ಎಂದು ಎಕೆ ಬಾಲನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವರು.