ನವದೆಹಲಿ: ಚಾಟ್ ಜಿಪಿಟಿಯಿಂದ ವಜಾಗೊಂಡಿದ್ದ ಸಂಸ್ಥೆಯ ಮಾಜಿ ಸಿಇಒ ಸ್ಯಾಮ್ ಆಲ್ಟ್ಮನ್ ಮೈಕ್ರೋಸಾಫ್ಟ್ ಸೇರಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೈಕ್ರೋಸಾಫ್ಟ್ ನಲ್ಲಿ ಕೃತಕ ಬುದ್ಧಿಮತ್ತೆಯತ್ತ ವಿಶೇಷವಾಗಿ ಗಮನ ಹರಿಸಲಿರುವ ತಂಡವನ್ನು ಸ್ಯಾಮ್ ಆಲ್ಟ್ಮನ್ ಮುನ್ನಡೆಸಲಿದ್ದಾರೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
ಈ ಬಗ್ಗೆ ಮಾತನಾಡಿರುವ ಮೈಕ್ರೋಸಾಫ್ಟ್ ನ ಸಿಇಒ ಹಾಗೂ ಅಧ್ಯಕ್ಷ ಸತ್ಯ ನಾದೆಳ್ಲ, ಸ್ಯಾಮ್ ಆಲ್ಟ್ಮನ್ಮ್, ಮುಕ್ತ ಕೃತಕ ಬುದ್ಧಿಮತ್ತೆ ಸಹ ಸಂಸ್ಥಾಪಕ ಗ್ರೆಗ್ ಬ್ರಾಕ್ಮನ್ ಹಾಗೂ ಮುಕ್ತ ಎಐ ನ ಇತರ ಉದ್ಯೋಗಿಗಳು ಇಲ್ಲಿ ಹೊಸ ಸುಧಾರಿತ AI ಸಂಶೋಧನಾ ತಂಡದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
"ನಾವು ಮುಕ್ತ ಕೃತಕ ಬುದ್ಧಿಮತ್ತೆ (OpenAI) ಜೊತೆಗಿನ ನಮ್ಮ ಪಾಲುದಾರಿಕೆಗೆ ಬದ್ಧರಾಗಿದ್ದೇವೆ ಮತ್ತು ನಮ್ಮ ಉತ್ಪನ್ನದ ಮಾರ್ಗಸೂಚಿಯಲ್ಲಿ ವಿಶ್ವಾಸ ಹೊಂದಿದ್ದೇವೆ, Microsoft Ignite ನಲ್ಲಿ ನಾವು ಘೋಷಿಸಿದ ಎಲ್ಲದರ ಜೊತೆಗೆ ನಾವೀನ್ಯತೆಯನ್ನು ಮುಂದುವರಿಸುವ ನಮ್ಮ ಸಾಮರ್ಥ್ಯ ಮತ್ತು ನಮ್ಮ ಗ್ರಾಹಕರು ಮತ್ತು ಪಾಲುದಾರರನ್ನು ಬೆಂಬಲಿಸುವುದನ್ನು ಮುಂದುವರಿಸುತ್ತೇವೆ ಎಂದು ನಾದೆಳ್ಲ ತಿಳಿಸಿದ್ದಾರೆ.
ಎಮ್ಮೆಟ್ ಶಿಯರ್ ಮತ್ತು OAI ನ ಹೊಸ ನಾಯಕತ್ವ ತಂಡವನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ. ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಗ್ರೆಗ್ ಬ್ರಾಕ್‌ಮನ್ ಸಹೋದ್ಯೋಗಿಗಳೊಂದಿಗೆ ಹೊಸ ಸುಧಾರಿತ AI ಸಂಶೋಧನಾ ತಂಡವನ್ನು ಮುನ್ನಡೆಸಲು ಮೈಕ್ರೋಸಾಫ್ಟ್‌ಗೆ ಸೇರುತ್ತಾರೆ ಎಂಬ ಸುದ್ದಿಯನ್ನು ಹಂಚಿಕೊಳ್ಳಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಅವರ ಯಶಸ್ಸಿಗೆ ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಲು ನಾವು ಶೀಘ್ರಗತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಎದುರು ನೋಡುತ್ತಿದ್ದೇವೆ" ಎಂದು ನಾದೆಳ್ಲಾ ಟ್ವೀಟ್ ಮಾಡಿದ್ದಾರೆ.