ಬದಿಯಡ್ಕ: ನಮ್ಮ ಧರ್ಮ, ಕಲೆಯಂತಹ ಸಮಾಜದ ಒಳಿತಿಗಾಗಿರುವ ಕೆಲಸಗಳು ನಿರಂತರವಾಗಿರಬೇಕು. ಆ ಮೂಲಕ ತೊಡಗಿಸಿಕೊಂಡು ಅದನ್ನು ಮುಂದಿನ ಪೀಳಿಗೆಯ ಉನ್ನತಿ ಸಹಾಯಕವಾಗಬಲ್ಲದು ಎಂಬುದಾಗಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀಜಿ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ತ್ರಿವೇಣಿ ಸಾಂಸ್ಕøತಿಕ ಭವನದ ಉದ್ಘಾಟನೆ ಹಾಗೂ 42ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಂದೂ ಕಡೆಯು ನಮ್ಮ ಧರ್ಮದ ರಕ್ಷಣೆಗಾಗಿ ಇಂತಹ ಕೇಂದ್ರಗಳಾಗಬೇಕು, ಅಲ್ಲಿ ಎಳೆವೆಯಲ್ಲಿಯೇ ಮಕ್ಕಳಲ್ಲಿ ದೇಶಭಕ್ತಿ, ಸುಸಜ್ಜಿತ ಪ್ರಜೆಯನ್ನಾಗಿಸುವುದಕ್ಕೆ ಸಾಧ್ಯವಾಗುವುದು ಎಂದು ಶ್ರೀಗಳು ಹೇಳಿದರು.
ಸಮಾರಂಭದಲ್ಲಿ ಶ್ರೀಮಂದಿರದ ಸೇವಾ ಸಮಿತಿ ಆಧ್ಯಕ್ಷ ಕೆ.ಗಂಗಾಧರ್ ತೆಕ್ಕೆಮೂಲೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಹಿರಿಯರು ಹಾಕಿಕೊಟ್ಟಂತಹ ಧರ್ಮದ ಅಡಿಪಾಯವನ್ನು ಸಂರಕ್ಷಿಸಿ ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮದ್ದು, ಇಂತಹ ಕೇಂದ್ರಗಳ ಮೂಲಕ ಸಮಾಜಮುಖೀ ಕೆಲಸಗಳಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕಿರಣ್ ಕುಮಾರ್ ಕುಣಿಕುಳ್ಳಾಯ, ತಲೇಕ ಸುಬ್ರಹ್ಮಣ್ಯ ಭಟ್, ಯೋಗೀಶ್ ಶರ್ಮಾ, ರಾಜನ್ ಪೆರಿಯಾ, ಶಿವಶಂಕರ ಎನ್.ನೆಕ್ರಾಜೆ, ಡಾ. ರಾಜೇಂದ್ರ ಪಿಲಾಂಕಟ್ಟೆ, ಹರಿನಾರಾಯಣ ಮಾಸ್ತರ್, ಮುಖೇಶ್ ಶುಭಾಶಂಸನೆಗೈದರು.
ವೇದಿಕೆಯಲ್ಲಿ ಕೃಷ್ಣ ಮಣಿಯಾಣಿ, ಸವಿತಾ, ಮೀನಾಕ್ಷಿ, ಭಾಸ್ಕರ ಪುರುಷ, ದಾಮೋದರ ಮೈಲುತೊಟ್ಟಿ, ವಿಶ್ವನಾಥ ಬಳ್ಳಪದವು, ರಾಜೇಶ್ ನೆಕ್ರಾಜೆ, ರಾಘವೇಂದ್ರ ಎಂ., ಶಶಿಧರ ತೆಕ್ಕೆಮೂಲೆ ಮತ್ತಿತರರು ಉಪಸ್ಥಿತದ್ದರು. ಈ ಸಂದರ್ಭದಲ್ಲಿ ಸುಜಾತ ಮಾಣಿಮೂಲೆ ಅವರನ್ನು ಗೌರವಿಸಲಾಯಿತು. ಶ್ರೀಧರ್ಮಸ್ಥಳ ಕ್ಷೇತ್ರದಿಂದ ಕೊಡಮಾಡಿದ ಸಹಾಯದನವನ್ನು ವಿತರಿಸಲಾಯಿತು. ರಾತ್ರಿ ಸತ್ಯನಾರಾಯಣ ಪೂಜೆ, ನೃತ್ಯ ಕಲಾ ಸಂಧ್ಯಾ ಕಾರ್ಯಕ್ರಮ, ಅನ್ನದಾನ ನಡೆಯಿತು.
ಶ್ರೀಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರನ್ನು ಚೆಂಡೆಮೇಳ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು.
ನ.21ರಂದು ಬೆಳಗ್ಗೆ ಭಜನೆ, ಸಂಗೀತ ಕಚೇರಿ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನೆ, ಮನು ಪಣಿಕ್ಕರ್ ಬಳಗದವರಿಂದ ತಾಯಂಬಕ, ನಾರಂಪಾಡಿ ಕ್ಷೇತ್ರದಿಂದ ಉಲ್ಪೆ ಮೆರವಣಿಗೆಯು ಶ್ರೀ ಮಂದಿರಕ್ಕೆ ಆಗಮಿಸಿತ್ತು. ರಾತ್ರಿ ಮಹಾಪೂಜೆ, ಅನ್ನದಾನ ನಡೆಯಿತು. ಸಾಂಸ್ಕøತಿ ಕಾರ್ಯಕ್ರಮದಂಗವಾಗಿ ಪಾಟುಪೆಟ್ಟಿ, ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾ ಸಂಘ ಇದರ ವತಿಯಿಂದ ದಕ್ಷಯಜ್ಞ ಗಧಾಯುದ್ಧ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತ್ತು.