ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನವಂಬರ್ 7 ರಿಂದ 10ರ ವರೆಗೆ ನಡೆಯಲಿರುವ 62 ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅವಲೋಕನಾ ಸಭೆ ಇಂದು ಹೈಸ್ಕೂಲ್ ಸಭಾಂಗಣದಲ್ಲಿ ನಿನ್ನೆ ನಡೆಯಿತು.
ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಇಲ್ಲಿಯ ತನಕದ ಪ್ರಗತಿಯನ್ನು ಶ್ಲಾಘಿಸಿದರು. ಕಲೋತ್ಸವದ ಯಶಸ್ಸಿಗಾಗಿ ರಚಿಸಿದ ಎಲ್ಲಾ 9 ಉಪಸಮಿತಿಗಳ ಕನ್ವೀನರ್ ತಮ್ಮ ಸಮಿತಿಯ ಪ್ರಗತಿಯನ್ನು ಮಂಡಿಸಿದರು.ಶಾಲಾ ವ್ಯವಸ್ಥಾಪಕ ಶಂಕರ ನಾರಾಯಣ ಭಟ್,ಹೈಸ್ಕೂಲ್ ಮುಖ್ಯೋಪಾಧ್ಯಾಯ ಗೋವಿಂದ ಭಟ್, ಹಿರಿಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಮಹಾಲಿಂಗಭಟ್, ಎಚ್.ಎಂ ಪೋರಂ ಸೆಕ್ರೆಟರಿ ಶಾಮ ಭಟ್, ಪಿ.ಟಿ.ಎ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ , ಸ್ಥಳೀಯ ಆರೋಗ್ಯಾಧಿಕಾರಿ ತಿರುಮಲೇಶ್, ಶಂಕರ ರಾವ್ ಕಕ್ವೆ, ಮುಂತಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗಾಗಿ ಸೂಕ್ತ ಮಾರ್ಗದರ್ಶನ ನೀಡಿದರು .
ಪ್ರಾಂಶುಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಸೂರ್ಯನಾರಾಯಣ ಭಟ್ ವಂದಿಸಿದರು . ಉಮಾದೇವಿ ನಿರೂಪಿಸಿದರು.