ಕಾಸರಗೋಡು: ಸಾರ್ವಜನಿಕ ವಲಯದ ಬೇಕಲ ರೆಸಾರ್ಟ್ ಅಭಿವೃದ್ಧಿ ನಿಗಮ (ಬಿಆರ್‍ಡಿಸಿ) ವ್ಯಾಪ್ತಿಯಲ್ಲಿರುವ ಪಳ್ಳಿಕ್ಕೆರೆ ಬೀಚ್ ಪಾರ್ಕ್ ಇನ್ನು ಮುಂದೆ ಬೇಕಲ ಬೀಚ್ ಪಾರ್ಕ್ ಎಂದು ಬೇಕಲ ಬೀಚ್ ಪಾರ್ಕ್ ಎಂಬುದಾಗಿ ಗುರುತಿಸಲ್ಪಡಲಿದೆ.
ಬೇಕಲ ಬೀಚ್ ಪಾರ್ಕ್ ಎಂಬುದಾಗಿ ಪುನ:ನಾಮಕರಣ ಮಾಡಿದ ಲಾಂಛನದ ಬಿಡುಗಡೆ ಸಮಾರಂಭವನ್ನು ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಮುಹಮ್ಮದ್ ರಿಯಾಝ್ ಅನಾವರಣಗೊಳಿಸಿದರು. ಬಿ.ಆರ್. ಆ.ಅ ಯಿಂದ ಉದ್ಯಾನವನವನ್ನು ಗುತ್ತಿಗೆವಹಿಸಿ ಮುನ್ನಡೆಸುತ್ತಿರುವ ಕ್ಯೂ. ಎಚ್ ಗ್ರೂಪ್ ನಿರ್ದೇಶಕ ಕೆ. ಕೆ. ಅಬ್ದುಲ್ ಲತೀಫ್ ಮತ್ತು ಪಾರ್ಕ್ ನಿರ್ದೇಶಕ ಅನಸ್ ಮುಸ್ತಫಾ ಅವರಿಗೆ ಸಚಿವ ಮಹಮ್ಮದ್ ರಿಯಾಸ್ ಲಾಂಛನವನ್ನು ಹಸ್ತಾಂತರಿಸಿದರು.
ಬೇಕಲ ಬೀಚ್ ಪಾರ್ಕ್‍ನಲ್ಲಿ ಡಿಸೆಂಬರ್ 20 ರಿಂದ 31 ರವರೆಗೆ ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವ ನಡೆಯಲಿದ್ದು, ಉದ್ಯಾನವನವನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬೀಚ್ ಹೆಸರು ಬದಲಾಯಿಸಿರುವುದಾಗಿ ಸಂಸ್ಥೆ ನಿರ್ದೇಶಕರು ತಿಳಿಸಿದ್ದಾರೆ.