ಕೊಲಕ್ಕಾಡ್: ಬ್ಯಾಂಕ್ ನೋಟಿಸ್ ನೀಡಿದ ನಂತರ 73 ವರ್ಷದ ರೈತರೊಬ್ಬರು ಉತ್ತರ ಕೇರಳ ಜಿಲ್ಲೆಯ ಕೊಲಕ್ಕಾಡ್‌ನಲ್ಲಿರುವ ತನ್ನ ನಿವಾಸದಲ್ಲಿ ಸೋಮವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಆತ್ಮಹತ್ಯೆಯ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ ಮತ್ತು ಸಾಲ ಮರುಪಾವತಿಯಲ್ಲಿ ವಿಫಲವಾದ ಕಾರಣ ಬ್ಯಾಂಕ್ ಅವರಿಗೆ ನೋಟಿಸ್ ನೀಡಿದ ನಂತರ ರೈತ ಎಂ ಆರ್ ಆಲ್ಬರ್ಟ್ ಮುಂಡಕ್ಕಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಲಕ್ಕಾಡ್ ಡೈರಿ ಸಹಕಾರಿಯ ದೀರ್ಘಾವಧಿಯ ಅಧ್ಯಕ್ಷರಾಗಿದ್ದ ಆಲ್ಬರ್ಟ್ ಅವರು ತಮ್ಮ ಆಸ್ತಿಯನ್ನು ಒತ್ತೆ ಇಟ್ಟು ಕೇರಳ ಬ್ಯಾಂಕ್‌ನ ಪೆರವೂರ್ ಶಾಖೆಯಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಮಂಗಳವಾರದೊಳಗೆ ಸಾಲ ಮರು ಪಾವತಿಸುವಂತೆ ಬ್ಯಾಂಕ್ ನೋಟಿಸ್ ನೀಡಿತ್ತು.
ಇದರಿಂದ ಒತ್ತಡಕ್ಕೆ ಸಿಲುಕಿದ ಆಲ್ಬರ್ಟ್ ಕೇರಳ ಸರ್ಕಾರದ ಮಹಿಳಾ ಸ್ವಸಹಾಯ ಸಂಘ ಕುಟುಂಬಶ್ರೀಯಿಂದ ಹಣಕಾಸಿನ ನೆರವು ಕೋರಿದ್ದರು ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಪ್ರಯತ್ನಗಳು ವಿಫಲವಾಗಿವೆ. ಸನ್ನಿಹಿತವಾದ ಗಡುವು ಮತ್ತು ಹಣಕಾಸಿನ ಒತ್ತಡದಿಂದಾಗಿ ಅವರು ತಮ್ಮ ಜೀವವನ್ನೆ ಕಳೆದುಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.