ನಾವು ಮುಖದ ಕಾಂತಿಗೆ, ಮುಖದ ಆರೋಗ್ಯಕ್ಕೆ ಎಷ್ಟು ಮಹತ್ವ ಕೊಡುತ್ತೇವೋ ಅಷ್ಟೇ ಮಹತ್ವವನ್ನು ನಮ್ಮ ಕೂದಲಿನ ಬೆಳವಣಿಗೆಗೆ ಕೂಡ ಕೊಡಬೇಕು ಒಂದು ವೇಳೆ ಕೂದಲಿನ ಬೆಳವಣಿಗೆಗೆ ಕೂದಲಿನ ಆರೈಕೆಗೆ ನಾವು ಸಮಯ ನೀಡದೆ ಇದ್ದಾಗ ಬಹಳ ಬೇಗ ಕೂದಲು ಹಾಳಾಗುತ್ತದೆ ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಅಕಾಲಿಕ ಬಿಳಿ ಕೂದಲು, ಅಧಿಕ ಕೂದಲು ಉದುರುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.
ಕೂದಲಿನ ಹೊಳಪಿಗೆ ಹಾಗೂ ಕೂದಲಿನ ಉತ್ತಮ ಬೆಳವಣಿಗೆಗೆ ಕೆಲವು ಪ್ರಮುಖ ಎಣ್ಣೆಗಳು ಸಹಾಯಕವಾಗುತ್ತವೆ. ನೀವು ಕೆಮಿಕಲ್ ಯುಕ್ತ ಎಣ್ಣೆಗಳನ್ನು ಬಳಸುವುದಕ್ಕಿಂತ ಮಂದವಾಗಿರುವ ಹಾಗೂ ಹೆಚ್ಚು ಪರಿಣಾಮಕಾರಿಯಾಗಿರುವ ಮೂಲಿಕೆಗಳಿಂದ ತಯಾರಿಸಿದ ಎಣ್ಣೆಯನ್ನು ಕೂದಲಿಗೆ ಹಚ್ಚುವುದು ಹೆಚ್ಚು ಸೂಕ್ತ. ಇದರಿಂದ ಕೂದಲಿಗೆ ಯಾವುದೇ ಅಡ್ಡ ಅಡ್ಡ ಪರಿಣಾಮಗಳು ಇಲ್ಲ ಹಾಗೂ ಕೂದಲಿನ ಆರೋಗ್ಯವೂ ಕೂಡ ಬಹಳ ಬೇಗ ಸುಧಾರಿಸುತ್ತದೆ.
ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀವು ಬಳಸಬಹುದಾದ ಒಂದು ಅತ್ಯುತ್ತಮ ಹಾಗೂ ಪರಿಣಾಮಕಾರಿಯಾಗಿರುವ ಎಣ್ಣೆ ಅಂದರೆ ದಾಸವಾಳದ ಎಣ್ಣೆ. ಹೌದು ನಿಮ್ಮ ಬಾಲ್ಕನಿಯಲ್ಲಿ ಅಥವಾ ಕೈದೋಟದಲ್ಲಿ ಬೆಳೆಯುವ ಸುಂದರವಾದ ದಾಸವಾಳದ ಹೂವು ನಿಮ್ಮ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಬಹುದು. ಅದರಲ್ಲೂ ಕೆಂಪು ದಾಸವಾಳದ ಹೂವುಗಳನ್ನು ಹೆಚ್ಚಾಗಿ ಸಾರಭೂತ ತೈಲವಾಗಿ ತಯಾರಿಸಲು ಬಳಸಲಾಗುತ್ತದೆ. ಹೀಗೆ ನೀವು ಕೂಡ ದಾಸವಾಳದ ಎಲೆ ಹಾಗೂ ಹೂವುಗಳಿಂದ ತಯಾರಿಸಲಾಗಿರುವ ಎಣ್ಣೆಯನ್ನು ಕೂದಲಿಗೆ ಬಳಸಿದರೆ ಅದರಿಂದ ಸಾಕಷ್ಟು ಉತ್ತಮ ಪ್ರಯೋಜನಗಳು ಇವೆ.
ಪೋಷಕಾಂಶ ಯುಕ್ತ ದಾಸವಾಳದ ಎಣ್ಣೆ!
ದಾಸವಾಳದ ಎಣ್ಣೆಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಇವೆ. ವಿಟಮಿನ್ ಎ ಸಿ, ಅಮೈನೋ ಆಮ್ಲ ಮೊದಲದು ಗುಣಲಕ್ಷಣಗಳು ಇರುವುದರಿಂದ ಇದು ನಿಮ್ಮ ತಲೆಯ ಚರ್ಮ ಹಾಗೂ ಕೂದಲಿನ ಪುನಶ್ಚೇತನಗೊಳಿಸುವ ಕೆಲಸವನ್ನು ಮಾಡುತ್ತದೆ. ದಾಸವಾಳದ ಎಣ್ಣೆ ಕೂದಲಿನ ಹೊಳಪು ಹೆಚ್ಚಿಸುವುದಲ್ಲದೆ ಕೂದಲಿನ ಬೆಳವಣಿಗೆಗೂ ಸಹಾಯಕಾರಿಯಾಗಿದೆ ಅಷ್ಟೇ ಅಲ್ಲದೆ ತಲೆಯಲ್ಲಿ ಇರುವ ತಲೆ ಹೊಟ್ಟು ಹೋಗಲಾಡಿಸಲು ಕೂಡ ಸಹಾಯಕವಾಗುತ್ತದೆ.
ಕೂದಲ ಬೆಳವಣಿಗೆಗೆ ಸಹಾಯಕ!
ದಾಸವಾಳದ ಎಣ್ಣೆ ಬಹಳ ಪರಿಣಾಮಕಾರಿಯಾಗಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವಂತಹ ಎಣ್ಣೆಯಾಗಿದೆ. ಇದರಲ್ಲಿ ಇರುವ ಅಮೈನೋ ಆಮ್ಲಗಳು ಹಾಗೂ ವಿಟಮಿನ್ ಸಿ ಅಂಶಗಳು ಕೂದಲಿನ ಬುಡ ಸದೃಢವಾಗುವಂತೆ ನೋಡಿಕೊಳ್ಳುತ್ತವೆ. ದಾಸವಾಳದ ಎಣ್ಣೆಯನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿದರೆ ರಕ್ತದ ಅರಿವು ಉಂಟಾಗಿ ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಕೂದಲು ಸೊಂಪಾಗಿ ಬೆಳೆಯಲು ಸಹಾಯಕವಾಗುತ್ತದೆ ಅಷ್ಟೇ ಅಲ್ಲದೆ ಕೂದಲ ಉದುರುವಿಕೆ ಸಮಸ್ಯೆಯಿಂದ ಕೂಡ ಮುಕ್ತಿ ಸಿಗುತ್ತದೆ.
ಕೂದಲು ದಪ್ಪವಾಗಿಸಲು!
ಸಾಮಾನ್ಯವಾಗಿ ಕೆಲವರ ಕೂದಲು ಉದ್ದ ಇದ್ದರೂ ಕೂಡ ಅದು ಅಷ್ಟು ದಪ್ಪವಾಗಿ ಇರುವುದಿಲ್ಲ ಅಂದರೆ ಕೂದಲಿನ ಸಾಂದ್ರತೆ ಬಹಳ ಕಡಿಮೆ ಇರುತ್ತದೆ. ಜೊತೆಗೆ ಕೆಲವರ ಕೂದಲು ಅತ್ಯಂತ ದುರ್ಬಲವಾಗಿರುತ್ತದೆ ಒಮ್ಮೆ ತಲೆಗೆ ಕೈ ಹಾಕಿ ಎಳೆದರೆ ನೂರಾರು ಕೂದಲುಗಳು ಕೈಗೆ ಬರುತ್ತವೆ ಅಷ್ಟರಮಟ್ಟಿಗೆ ದುರ್ಬಲವಾಗಿರುವ ಕೂದಲನ್ನು ಕೂಡ ನೀವು ಸದೃಢಪಡಿಸಿಕೊಳ್ಳಬೇಕು ಎಂದರೆ ದಾಸವಾಳದ ಎಣ್ಣೆಯನ್ನು ಬಳಸಬೇಕು. ವಿಟಮಿನ್ ಗಳು ಖನಿಜ ಹಾಗೂ ಪ್ರೋಟೀನ್ ಅಂಶ ಇರುವುದರಿಂದ ಕೂದಲಿನ ಬುಡದಿಂದಲೇ ಗಟ್ಟಿಗೊಳಿಸಲು ಸಹಾಯಕವಾಗುತ್ತದೆ ಇದರಿಂದಾಗಿ ಕೂದಲು ತುದಿಯಲ್ಲಿ ಒಡೆಯುವುದು ಅಂದರೆ ಸ್ಪ್ಲಿಟ್ ಹೇರ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ ಕೂದಲು ತುದಿಯಲ್ಲಿ ಒಡೆಯುವಿಕೆ ನಿಂತು ಹೋದರೆ ಕೂದಲಿನ ಬೆಳವಣಿಗೆ ಸುಲಭವಾಗಿ ಆಗುತ್ತದೆ. ಹೊರಗಡೆಯ ಪ್ರದೂಷಣೆಯಿಂದ ಕೂದಲಿನ ಹೊಳಪು ಹಾಳಾಗಿದ್ದರೆ ಅದನ್ನು ಕೂಡ ದಾಸವಾಳದ ಎಣ್ಣೆ ಸುಧಾರಿಸುವಲ್ಲಿ ಸಹಾಯಕವಾಗಿದೆ.
ಕೂದಲಿನ ಸ್ಥಿತಿ ಸುಧಾರಿಸುತ್ತದೆ!
ದಾಸವಾಳದ ಎಣ್ಣೆ ಒಂದು ಉತ್ತಮ ನೈಸರ್ಗಿಕ ಕಂಡೀಷನರ್ ಆಗಿದೆ ನೀವು ಹೊರಗಡೆಯಿಂದ ದುಬಾರಿ ಬೆಲೆಗೆ ಕಂಡಿಷನರ್ ಖರೀದಿ ಮಾಡಿ ಅದರಲ್ಲಿ ಇರುವ ಕೆಮಿಕಲ್ ಗಳಿಂದ ಕೂದಲು ಕೆಡಿಸಿಕೊಳ್ಳುವ ಬದಲು ದಾಸವಾಳದ ಎಣ್ಣೆಯನ್ನು ಬಳಸುವುದು ಸೂಕ್ತ ಇದರಲ್ಲಿ ಯಾವುದೇ ರೀತಿಯಾದಂತಹ ಕೆಮಿಕಲ್ ಇರುವುದಿಲ್ಲ ಹಾಗಾಗಿ ರಾಸಾಯನಿಕ ಮುಕ್ತ ಹೇರ್ ಆಯಿಲ್ ಇದಾಗಿದ್ದು, ವಾರದಲ್ಲಿ ಎರಡರಿಂದ ಮೂರು ಬಾರಿ ಕೂದಲಿಗೆ ಹಚ್ಚುತ್ತಾ ಬಂದರೆ ಕೂದಲಿನ ಸ್ಥಿತಿ ಉತ್ತಮವಾಗಿರುತ್ತದೆ. ಯಾವುದೇ ಪ್ರದೂಷಣೆಯಿಂದ ನಿಮ್ಮ ಕೂದಲು ಹಾಳಾಗಿದ್ದರೆ ಮತ್ತೆ ಯಥಾ ಸ್ಥಿತಿಗೆ ಕೂದಲು ಬರುವುದಕ್ಕೆ ಸಹಾಯ ಮಾಡುತ್ತದೆ. ಕೂದಲು ಸಿಕ್ಕುಗಟ್ಟಿದಂತೆ ಆಗುವುದು, ಹೊಳಪನ್ನು ಕಳೆದುಕೊಳ್ಳುವುದು, ಜಿಡ್ಡು ಕಟ್ಟಿದಂತೆ ಇರುವುದು ಈ ಎಲ್ಲಾ ಸಮಸ್ಯೆಗಳನ್ನು ದಾಸವಾಳ ಎಣ್ಣೆ ಹಚ್ಚುವುದರಿಂದ ನಿವಾರಿಸಿಕೊಳ್ಳಬಹುದು.
ಅತ್ಯುತ್ತಮವಾದ ದಾಸವಾಳ ಎಣ್ಣೆಗಳು!
ನೀವು ನಿಮ್ಮ ಕೂದಲಿಗೆ ಬಳಸಬಹುದಾದ ಹೈಬಿಸ್ಕಸ್ ಹೇರ್ ಆಯಿಲ್ ಎಣ್ಣೆಯನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡಬಹುದು ಹಾಗೆ ನೀವು ಖರೀದಿ ಮಾಡುವುದಾದರೆ ಯಾವ ಎಣ್ಣೆ ಸೂಕ್ತ ಎಂಬುದನ್ನು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಡಾಬರ್ ವಾಟಿಕ ಹೈಬಿಸ್ಕಸ್ ಆಯಿಲ್ - ಇದರಲ್ಲಿ ತೆಂಗಿನ ಎಣ್ಣೆ ಹಾಗೂ ದಾಸವಾಳದ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿರಲಾಗುತ್ತದೆ ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಡೆವಿನಜ ಹೈಬಿಸ್ಕಸ್ ಎಸೆನ್ಶಿಯಲ್ ಆಯಿಲ್ - ತೆಂಗಿನಕಾಯಿ ಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ದಾಸವಾಳದ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ ಇದು ನಿಮ್ಮ ದುರ್ಬಲ ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ.
ನಾಟ್ ಹ್ಯಾಬಿಟ್ ಹೈಬಿಸ್ಕಸ್ ಆಮ್ಲ ಸಮ್ಮರ್ ಆಯಿಲ್ - ಹೆಸರೇ ಸೂಚಿಸುವಂತೆ ಆಮ್ಲ ಕರಿಬೇವಿನ ಎಲೆ ಹಾಗೂ ಮೊದಲಾದ ಗಿಡಮೂಲಿಕೆಗಳನ್ನು ದಾಸವಾಳದ ಎಣ್ಣೆಯ ಜೊತೆಗೆ ಸಂಯೋಜಿಸಿ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ. ಪೋಷಕಾಂಶಯುಕ್ತವಾದ ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆ ಆಗುತ್ತದೆ.
ಹಿಮಾಲಯನ್ ಒರಿಜಿನ್ ನ್ಯಾಚುರಲ್ ಹೈಬಿಸ್ಕಸ್ ಹೇರ್ ಆಯಿಲ್ - ಇದು ಅಕಾಲಿಕ ಬಿಳಿ ಕೂದಲನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಬೇರೆ ಬೇರೆ ಗಿಡಮೂಲಿಕೆಗಳಿಂದ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ.
ಖಾದಿ ನ್ಯಾಚುರಲ್ ಹೈಬಿಸ್ಕಸ್ ಅಂಡ್ ಅಲೋವೆರಾ ಹೇರ್ ಆಯಿಲ್ - ಕೂದಲಿನ ಪೋಷಣೆಗೆ ಹಾಗೂ ತಲೆಹೊಟ್ಟು ನಿವಾರಣೆಗೆ ಅತ್ಯುತ್ತಮ ನೈಸರ್ಗಿಕ ಎಣ್ಣೆಯಾಗಿ ಈ ಎಣ್ಣೆಯನ್ನು ಬಳಸಬಹುದು ದಾಸವಾಳದ ಹೂವುಗಳು ಹಾಗೂ ಅಲೋವೆರಾ ಜೆಲ್ ಮಿಶ್ರಣ ಮಾಡಿ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ.
ಮನೆಯಲ್ಲಿಯೇ ತಯಾರಿಸಿ ದಾಸವಾಳದ ಎಣ್ಣೆ!
ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ರಾಂಡ್ ನ ದಾಸವಾಳದ ಎಣ್ಣೆ ಲಭ್ಯವಿದೆ ಆದರೆ ನೀವು ಮನೆಯಲ್ಲಿಯೇ ಇನ್ನಷ್ಟು ನ್ಯಾಚುರಲ್ ಆಗಿ ಎಣ್ಣೆ ತಯಾರಿಸಿಕೊಳ್ಳಲು ಬಯಸಿದರೆ ಹೇಗೆ ದಾಸವಾಳದ ಎಣ್ಣೆ ತಯಾರಿಸಬಹುದು ಎಂಬುದನ್ನು ನೋಡೋಣ.
ದಾಸವಾಳದ ಎಣ್ಣೆ ತಯಾರಿಸಲು ಬೇಕಾಗುವ ವಸ್ತುಗಳು!
ನಾಲ್ಕರಿಂದ ಐದು ದಾಸವಾಳದ ಹೂವು, ದಾಸವಾಳದ ಎಲೆ, 10 ಕರಿಬೇವಿನ ಎಲೆ, 120 ಎಂಎಲ್ ತೆಂಗಿನ ಎಣ್ಣೆ.
ದಾಸವಾಳದ ಎಣ್ಣೆ ತಯಾರಿಸುವ ವಿಧಾನ!
ದಾಸವಾಳದ ಹೂವು ಎಲೆ ಹಾಗೂ ಕರಿಬೇವಿನ ಎಲೆಯನ್ನು ಕಲ್ಲಿನಲ್ಲಿ ಜಜ್ಜಿ ಪೇಸ್ಟ್ ತಯಾರಿಸಿಕೊಳ್ಳಬೇಕು. ನಂತರ ಒಂದು ಪಾತ್ರೆಗೆ ತೆಂಗಿನ ಎಣ್ಣೆ ಹಾಕಿ ಬಿಸಿ ಮಾಡಿ ಈ ಪೇಸ್ಟ್ ಅನ್ನು ಎಣ್ಣೆಗೆ ಸೇರಿಸಿ ನಾಲ್ಕರಿಂದ ಐದು ನಿಮಿಷ ಕುದಿಸಬೇಕು. ಎಣ್ಣೆ ತಣ್ಣಗಾದ ನಂತರ ಅದನ್ನು ಸೋಸಿ ಆ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬೇಕು. ನಿಯಮಿತವಾಗಿ ನೀವು ಈ ಎಣ್ಣೆಯನ್ನು ತಲೆಗೆ ಹಚ್ಚಿ ಮಸಾಜ್ ಮಾಡುತ್ತಾ ಬಂದರೆ ಕೂದಲಿನ ಬೆಳವಣಿಗೆ ಸಹಾಯಕವಾಗುತ್ತದೆ ಕೂದಲಿನ ಹೊಳಪು ಕೂಡ ಹೆಚ್ಚಾಗುತ್ತದೆ. ದಾಸವಾಳದ ಎಣ್ಣೆ ತಯಾರಿಸಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿಯೂ ಇಡಬಹುದು.