ಕಾಸರಗೋಡು: ಪರಿಶಿಷ್ಟ ವರ್ಗದ ಗ್ರಾಮಗಳು ಮತ್ತು ವ್ಯಕ್ತಿಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಮೈಕ್ರೋಪ್ಲಾನ್ ಯೋಜನೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಖಾಲಿ ಇರುವ ಎನ್ಯೂಮರೇಟರ್ ಹುದ್ದೆಗಳಿಗೆ ಪರಿಶಿಷ್ಟ ವರ್ಗದ ಯುವತಿಯುವಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಪಷ್ಟ ಹಾಗೂ ನಿಖರವಾದ ಪರಿಶಿಷ್ಟ ವರ್ಗದವರ ಸಮಗ್ರ ಮಾಹಿತಿ ಸಂಗ್ರಹಿಸಲು ಸ್ಮಾರ್ಟ್ ಫೆÇೀನ್ ನಲ್ಲಿ ಪರಿಣತಿ ಹೊಂದಿರುವ ಮತ್ತು ಪ್ಲಸ್ ಟು ಅಥವಾ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ 18 ವರ್ಷ ಪೂರೈಸಿದ ಮತ್ತು 30 ವರ್ಷದೊಳಗಿನ ಪರಿಶಿಷ್ಟ ವರ್ಗದ ಯುವತಿ ಯುವಕರಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಜಾತಿ ಮತ್ತು ಶೈಕ್ಷಣಿಕ ಅರ್ಹತೆಯನ್ನು ಸಾಬೀತುಪಡಿಸುವ ಪ್ರಮಾಣಪತ್ರಗಳ ಪ್ರತಿಗಳೊಂದಿಗೆ ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿದ ಬಯೋ-ಡೇಟಾದೊಂದಿಗೆ ಕಾಸರಗೋಡು ಟ್ರೈಬಲ್ ಡೆವಲಪ್ಮೆಂಟ್ ಆಫೀಸ್ ನಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ 04994 255466 ಸಂಪರ್ಕಿಸಿ.