ಕುಂಬಳೆ: ಆರಿಕ್ಕಾಡಿಯ ಶ್ರೀ ಮಲ್ಲಿಕಾರ್ಜುನ ಕುಟುಂಬದ ನಾಗಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಾಗ ಮೂರ್ತಿ ಬಾಲಾಲಯ ಹಾಗು ನಾಗರಕಟ್ಟೆ ಭೂಮಿ ಪೂಜೆ ಕುಂಬಳೆ ಸೀಮೆಯ ಆರಿಕ್ಕಾಡಿ ಹಳೆ ಮಲ್ಲಿಕಾರ್ಜುನ ದೇವಾಲಯದ ವಠಾರದಲ್ಲಿ ಬಡಾಜೆ ಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಗಣ ಹೋಮ, ಸಕಲ ಧಾರ್ಮಿಕ ವಿಧಿ ವಿಧಾನಗಳನ್ನು ತಂತ್ರಿವರ್ಯರು ನಡೆಸಿಕೊಟ್ಟರು. ಶಿಲ್ಪಿ ರಮೇಶ್ ಕಾರಂತರು ಅಡಿಪಾಯ ಹಾಕಿಸಿಕೊಟ್ಟರು. ತಂತ್ರಿವರ್ಯರ ಜೊತೆಯಲ್ಲಿ ಪೂಜಾ ವಿಧಿ ವಿಧಾನಗಳೊಂದಿಗೆ ಶ್ರೀ ಮಲ್ಲಿಕಾರ್ಜುನ ಕ್ಷೇತ್ರದ ಮುಖ್ಯ ಅರ್ಚಕÀ ಶ್ರೀನಾಥ್ ಭಟ್ ಅವರು ಜೊತೆಗೂಡಿದರು. ಈ ಸಂದರ್ಭ ಶ್ರೀ ಮಲ್ಲಿಕಾರ್ಜುನ ಕುಟುಂಬ ನಾಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ರಾವ್ ಕುಂಬ್ಳೆ, ಕೋಶಾಧಿಕಾರಿ ಸುಶಾಂತ್, ಚಂದ್ರಕಾಂತ್, ಧನುಷ್, ಜಯಾನಂದ್, ಲಕ್ಷ್ಮೀಕಾಂತ್ ಮತ್ತು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಸಮಿತಿ ಪ್ರಮುಖರಾದ ರಮಾಕಾಂತ್, ಬಾಲಕೃಷ್ಣ, ಜ್ಯೋತಿಷ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.