ಕಾಸರಗೋಡು: ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣ ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಜಾಗೃತಿ ತರಗತಿ ಆಯೋಜಿಸಲು ರಾಜ್ಯ ಮಹಿಳಾ ಆಯೋಗ ತೀರ್ಮಾನಿಸಿರುವುದಾಗಿ ರಾಜ್ಯ ಮಹಿಳಾ ಆಯೋಗದ ಸದಸ್ಯೆ, ವಕೀಲೆ ಪಿ.ಕುಞËಯಿಷಾ ತಿಳಿಸಿದ್ದಾರೆ. ಅವರು ಮಹಿಳಾ ಆಯೋಗದ ಜಿಲ್ಲಾ ಮಟ್ಟದ ಅವಲೋಕನಾ ಸಭೆಯಲ್ಲಿ ಮಾತನಾಡಿದರು.
ಪೆÇಲೀಸರ ವಿರುದ್ಧವೂ ದೂರುಗಳು ಹೆಚ್ಚಾಗುತ್ತಿವೆ. ಮಾದಕ ವಸ್ತುಗಳ ಸೇವನೆಯಿಂದ ಕೌಟುಂಬಿಕ ಸಂಬಂಧಗಳು ಹಾಳಾಗುತ್ತಿವೆ. ಇದರ ವಿರುದ್ಧ ಜಿಲ್ಲೆಯ ಕರಾವಳಿ ಮತ್ತು ಬುಡಕಟ್ಟು ಪ್ರದೇಶದ ಎರಡು ಸ್ಥಳಗಳಲ್ಲಿ ಮುಂದಿನ ತಿಂಗಳು ಜಾಗೃತಿ ಶಿಬಿರ ನಡೆಸಲಾಗುವುದು. ಕಾಸರಗೋಡು ಕಲೆಕ್ಟರೇಟ್ ಮಿನಿ ಸಮ್ಮೇಳನ ಸಭಾಂಗಣದಲ್ಲಿ ನಡೆದ ಮಹಿಳಾ ಆಯೋಗದ ಸಭೆಯಲ್ಲಿ 20 ದೂರುಗಳನ್ನು ಪರಿಗಣಿಸಲಾಗಿದ್ದು, ಮೂರು ದೂರುಗಳಿಗೆ ಪರಿಹಾರ ಕಲ್ಪಿಸಲಾಗಿದೆ. ಮೂರು ದೂರುಗಳ ಬಗ್ಗೆ ಪೆÇಲೀಸ್ ವರದಿ ಕೇಳಲಾಗಿದೆ. 14 ದೂರುಗಳನ್ನು ಮುಂದಿನ ಸಭೆಯಲ್ಲಿ ಪರಿಗಣಿಸಲು ತೀಮಾನಿಸಲಾಗಿದೆ ಸಿಂಗಲ್ ವಿಮೆನ್ ಪಬ್ಲಿಕ್ ಹಿಯರಿಂಗ್ ನ. 25ರಂದು ಕಾಸರಗೋಡಿನ ವ್ಯಾಪಾರ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಮಹಿಳಾ ಸೆಲ್ ಡಿವೈಎಸ್ಪಿ ಸೀತಾ, ವಕೀಲೆ ಇಂದಿರಾವತಿ, ಸಿ.ಪಿ. ಓ.ಕೆ.ಎಸ್.ಶೀಮಾ, ಬಿಜು ಶ್ರೀಧರನ್ ಮತ್ತು ವಿ.ಎಸ್.ಪ್ರವೀಣ್ ಸಭೆಯಲ್ಲಿ ಉಪಸ್ಥಿತರಿದ್ದರು.