ಕಾಸರಗೋಡು: ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರ ನಿಟ್ಟಿನಲ್ಲಿ ಹಾಗೂ ಸ್ತ್ರೀಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತಂದು ರಾಷ್ಟ್ರದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಉದ್ದೇಶದೊಂದಿಗೆ ಮಹಿಳಾ ಸಮನ್ವಯ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿಯ ವತಿಯಿಂದ ಡಿಸೆಂಬರ್ 10 ರಂದು ನಡೆಯಲಿರುವ ಸ್ತ್ರೀಶಕ್ತಿ ಸಂಗಮ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ನ. 5ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ನಗರಸಭಾಂಗಣದಲ್ಲಿ ಜರುಗಲಿದೆ. ನಿವೃತ್ತ ಜಿಲ್ಲಾಧಿಕಾರಿ ಡಾ ಪಿ.ಕೆ ಜಯಶ್ರೀ ಸಭೆ ಉದ್ಘಾಟಿಸುವರು. ಸಮಾಜಿಕ, ಸಆಂಸ್ಕ್ರತಿ ರಂಗದ ಗಣ್ಯ ವ್ಯಕ್ತಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪರಕಟಣೆ ತಿಳಿಸಿದೆ.