ಪತ್ತನಂತಿಟ್ಟ: ಶಬರಿಮಲೆ ಯಾತ್ರೆಯ ಕಾನನಪಥದುದ್ದಕ್ಕೂ ಅಯ್ಯಪ್ಪ ಭಕ್ತರ ದಾಹ ತಣಿಸಲು ಗ್ರಾಮವಾಸಿಗಳ ತಂಡ ಸದಾ ಕಾರ್ಯಪ್ರವೃತ್ತವಾಗಿದೆ. ಶಬರಿಮಲೆಗೆ ಆಗಮಿಸುವ ಭಕ್ತರ ಬಾಯಾರಿಕೆ ನೀಗಿಸಲು ಪಾಲಕ್ಕಾಡ್ ನ ಅಟ್ಟಪ್ಪಾಡಿ ಗ್ರಾಮಗಳ ಯುವ ವನವಾಸಿಗಳು ಕುಡಿನೀರು ಒದಗಿಸುತ್ತಿದ್ದಾರೆ.
ಪುತ್ತೂರು ಪೋಲೀಸರ ವಿಶೇಷ ಸೂಚನೆಯಂತೆ ಅರಣ್ಯವಾಸಿ ಯುವಕರು ತಿರುವಾಂಕೂರು ದೇವಸ್ವಂ ಮಂಡಳಿಯಲ್ಲಿ ದಿನಗೂಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು.
ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನಕ್ಕೆ ಹಾಜರಾಗಲು ಪೆÇಲೀಸ್ ಅಧಿಕಾರಿಗಳು ಸಹಾಯ ಮಾಡಿದರು. ಬಾಯಾರಿದ ಅಯ್ಯಪ್ಪ ಭಕ್ತರಿಗೆ ನೀರು ಕೊಡುವ ಭಾಗ್ಯ ಸಿಕ್ಕಿದ್ದು ಪುಣ್ಯ ಎಂದು ಅರಣ್ಯದ ಯುವಕರು ಹೇಳುತ್ತಾರೆ.