ವಯನಾಡು: ಜಿಲ್ಲೆಯಲ್ಲಿ ನಕ್ಸಲ್ ತಂಡದ ಅಟ್ಟಹಾಸ ಮಿತಿಮೀರಿ ಬೆಳೆಯುತ್ತಿರುವುದರಿಂದ ರಾತ್ರಿ ವೇಳೆ ಏಡ್ ಪೋಸ್ಟ್ ಬಂದ್ ಆಗಲಿದೆ. ವಯನಾಡ್ ಕಟ್ಟಿಕುಳಂ ಏಡ್ ಪೋಸ್ಟ್ ಅನ್ನು ರಾತ್ರಿ ವೇಳೆ ಮುಚ್ಚಲು ನಿರ್ಧರಿಸಲಾಗಿದೆ. ಸಂಜೆ 7 ರಿಂದ ಬೆಳಿಗ್ಗೆ 7 ರವರೆಗೆ ಮುಚ್ಚಲಾಗುವುದು.
ಬತ್ತೇರಿಯಲ್ಲಿ ನಕ್ಸಲ್ ತಂಡದಿಂದ ಶಸ್ತ್ರಾಸ್ತ್ರಗಳನ್ನು ಪೋಲೀಸರು ವಶಪಡಿಸಿಕೊಂಡರು. ವಯನಾಡಿನ ಚಪ್ಪರಂ ಕಾಲೋನಿಯಲ್ಲಿ ತಂಡದೊಂದಿಗಿನ ಎನ್‍ಕೌಂಟರ್‍ನಲ್ಲಿ ಪೋಲೀಸರು ನಾಲ್ಕು ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಬೇರೆ ರಾಜ್ಯಗಳ ನಕ್ಸಲ್ ತಂಡಗಳ ಶಕ್ತಿ ಕೇಂದ್ರಗಳಿಂದ ಶಸ್ತ್ರಾಸ್ತ್ರಗಳನ್ನು ತರಲಾಗಿದೆ ಎಂಬುದು ಪ್ರಾಥಮಿಕ ತೀರ್ಮಾನ.
ನವೆಂಬರ್ 7 ರಂದು ರಾತ್ರಿ 10.45 ರ ಸುಮಾರಿಗೆ ವಯನಾಡ್ ಬತ್ತೇರಿಯಲ್ಲಿ ನಕ್ಸಲ್ ತಂಡ ಮತ್ತು ಪೋಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಅರಣ್ಯ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ಪೋಲೀಸರು ನಕ್ಸಲ್ ತಂಡದ ಮೇಲೆ ಗುಂಡಿನ ದಾಳಿ ನಡೆಸಿದರು. ಸುಮಾರು ಅರ್ಧ ಗಂಟೆ ಕಾಲ ಗುಂಡಿನ ಚಕಮಕಿ ನಡೆಯಿತು. ಘಟನೆಯಲ್ಲಿ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.