ಕಾಸರಗೋಡು: ಹೈನುಗಾರಿಕೆ ಅಭಿವೃದ್ಧಿ ಇಲಾಖೆಯ ಆಡಳಿತ ನಿಯಂತ್ರಣದಲ್ಲಿರುವ ಹೈನುಗಾರರ ಕಲ್ಯಾಣ ನಿಧಿ ಮಂಡಳಿಯು ಮಿಲ್ಮಾ ಸಹಯೋಗದಲ್ಲಿ ಹೈನುಗಾರರಿಗೂ ಹೈನುಗಾರಿಕೆ ಸಂಘ ನೌಕರರಿಗೂ ಕ್ಷೀರಸಾಂತ್ವನ ಸಮಗ್ರ ಇನ್ಶುರೆನ್ಸ್ ಯೋಜನೆಯನ್ನು ಜಾರಿಗೊಳಿಸುತ್ತದೆ.
ಹೈನುಗಾರರ ಕಲ್ಯಾಣ ನಿಧಿಯ ಸದಸ್ಯರಿಗೂ 2023 ರ ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಹೈನುಗಾರಿಕೆ ಸಂಘದಲ್ಲಿ ಹಾಲು ಅಳತೆ ಮಾಡುವವರಿಗೆ ಯೋಜನೆಯಲ್ಲಿ ಸದಸ್ಯರಾಗಬಹುದು. ಆರೋಗ್ಯ ಸುರಕ್ಷಾ, ಅಪಘಾತ ಸುರಕ್ಷಾ, ಲೈಫ್ ಇನ್ಶುರೆನ್ಸ್ ಮುಂತಾದ ಮೂರು ಪಾಲಿಸಿಗಳಲ್ಲಿ ಸದಸ್ಯರಾಗಬಹುದಾಗಿದೆ. ಆರೋಗ್ಯ ಸುರಕ್ಷಾ ಪಾಲಿಸಿಗಳಲ್ಲಿ ರೈತರ ಜೀವನ ಸಂಗಾತಿಗೆ ಮತ್ತು ರೈತನ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಸದಸ್ಯರಾಗಬಹುದು. ಆರೋಗ್ಯ ಇನ್ಶುರೆನ್ಸಿನಲ್ಲಿ ರೈತರಿಗೆ 3,450 ರೂಪಾಯಿ, ಸಂಗಾತಿಗೆ 2,900 ರುಪಾಯಿ ಮತ್ತು ಮಕ್ಕಳಿಗೆ 1,650 ರೂಪಾಯಿ ಪ್ರೀಮಿಯಂ ಮೊತ್ತವಾಗಿರುತ್ತದೆ. ಅಪಘಾತ ಸುರಕ್ಷಾ 186 ರೂಪಾಯಿ ಮತ್ತು ಎಲ್.ಐ.ಸಿ ಪಾಲಿಸಿಗೆ 336 ರೂಪಾಯಿ ಪ್ರೀಮಿಯಂ ಮೊತ್ತವಾಗಿದೆ. ಒಬ್ಬ ರೈತನಿಗೆ 1,725 ರೂಪಾಯಿಗಳನ್ನು ಕಲ್ಯಾಣ ನಿಧಿ ಸಬ್ಸಿಡಿ ಆಗಿ ನೀಡುತ್ತದೆ. 18 ರಿಂದ 80 ವರ್ಷ ಮಧ್ಯೆ ವಯಸ್ಸಿನವರಿಗೆ ಸೇರಬಹುದು. ಆರೋಗ್ಯ ಸುರಕ್ಷಾ ಪಾಲಿಸಿಗೆ ರೂ.1 ಲಕ್ಷದವರೆಗೆ ಕ್ಲೈಮ್ ಲಭಿಸುತ್ತದೆ. ಅಸ್ತಿತ್ವದಲ್ಲಿರುವ ಕಾಯಿಲೆಗಳ ಚಿಕಿತ್ಸೆಗಾಗಿ 50,000 ರೂಪಾಯಿವರೆಗೆ ಕ್ಲೈಮ್ ಲಭ್ಯವಿದೆ. ಅಪಘಾತ ಸುರಕ್ಷಾ ಪಾಲಿಸಿಗೆ 7 ಲಕ್ಷ ರೂಪಾಯಿ, 60 ವರ್ಷ ವರೆಗಿನವರಿಗೆ ಸಾವು ಸಂಭವಿಸಿದರೆ ಲೈಫ್ ಇನ್ಶುರೆನ್ಸ್ ಪಾಲಿಸಿಯಲ್ಲಿ 1 ಲಕ್ಷದವರೆಗೆ ಕ್ಲೈಮ್ ಲಭಿಸುತ್ತದೆ. ಪಾಲಿಸಿ ಕವರೇಜ್ ಡಿಸೆಂಬರ್ 1, 2023 ರಿಂದ ನವೆಂಬರ್ 30, 2024 ರವರೆಗೆ ಇರುತ್ತದೆ. ಯೋಜನೆಗೆ ಸೇರಲು ಇಚ್ಛಿಸುವವರು ಬ್ಲಾಕ್ ಮಟ್ಟದ ಹೈನುಗಾರಿಕೆ ಅಭಿವೃದ್ಧಿ ಯೂನಿಟ್ ಅಥವಾ ಹೈನುಗಾರಿಕೆ ಸಂಘವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.