HEALTH TIPS

ಚೀನಾ: ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಹೆಚ್ಚಿದ ಆತಂಕ

                 ಶಾಂಘೈ (ರಾಯಿಟರ್ಸ್): ಉಸಿರಾಟದ ಸಮಸ್ಯೆ ಪ್ರಕರಣಗಳು ಮುಖ್ಯವಾಗಿ ಮಕ್ಕಳಲ್ಲಿ ಗಣನೀಯವಾಗಿ ಏರಿಕೆಯಾದ ಹಿಂದೆಯೇ ಕಟ್ಟೆಚ್ಚರ ವಹಿಸುವಂತೆ ನಾಗರಿಕರಿಗೆ ಚೀನಾ ಸಲಹೆ ಮಾಡಿದೆ. ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ದಟ್ಟಣೆ ಕಂಡುಬಂದಿದೆ.

              ಈ ಮಧ್ಯೆ, ಸೋಂಕು ಪ್ರಕರಣ ಹೆಚ್ಚುತ್ತಿರುವ ಕುರಿತು ವರದಿಯನ್ನು ಸಲ್ಲಿಸಲು ಚೀನಾಗೆ ಸೂಚಿಸಿದ್ದ ವಿಶ್ವ ಆರೋಗ್ಯ ಸಂಘಟನೆಯು (ಡಬ್ಲ್ಯುಎಚ್‌ಒ), ಚೀನಾದಲ್ಲಿ ಭಿನ್ನ ಅಥವಾ ಹೊಸತಾದ ರೋಗಕಾರಕ ವೈರಾಣು ಪತ್ತೆಯಾಗಿಲ್ಲ ಎಂದು ಶುಕ್ರವಾರ ತಿಳಿಸಿದೆ.

                 ಕೋವಿಡ್‌-19 ನಿರ್ಬಂಧಗಳನ್ನು ಸಡಿಲಿಸಿದ ನಂತರದ ಪ್ರಥಮ ಚಳಿಗಾಲ ಪ್ರವೇಶಿಸಿದ ಹಿಂದೆಯೇ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಏರಿಕೆಯಾಗಿವೆ. ಮುಖ್ಯವಾಗಿ ಬೀಜಿಂಗ್‌, ಲಯೊನಿಂಗ್ ಪ್ರಾಂತ್ಯದಲ್ಲಿ ತೀವ್ರವಾಗಿದ್ದು, ಆಸ್ಪತ್ರೆಗಳಲ್ಲಿ ಉದ್ದನೆಯ ಸಾಲು ಇದೆ.

                 ಚಳಿಗಾಲ ಮತ್ತು ವಸಂತಕಾಲದಲ್ಲಿ ಮಕ್ಕಳಲ್ಲಿ ಸೋಂಕು, ಜ್ವರದ ಸಮಸ್ಯೆಗಳು ಹೆಚ್ಚಾಗಬಹುದು. ಭವಿಷ್ಯದಲ್ಲಿ ಕೆಲವು ಕಡೆ ಶ್ವಾಸಕೋಶವನ್ನು ಬಾಧಿಸುವ ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೋಂಕು ಹೆಚ್ಚಾಗಬಹುದು. ಅಲ್ಲದೆ, ಕೋವಿಡ್ ಸೋಂಕು ಮತ್ತೆ ಕಾಡುವ ಸಾಧ್ಯತೆಗಳು ಇವೆ ಎಂದು ರಾಜ್ಯ ಮಂಡಳಿ ಜನತೆಗೆ ಎಚ್ಚರಿಕೆ ನೀಡಿದೆ.

              ಸೋಂಕು ಪ್ರಕರಣಗಳ ಕುರಿತು ಸಕಾಲದಲ್ಲಿ, ವ್ಯವಸ್ಥಿತವಾಗಿ ಮಾಹಿತಿ ನೀಡಬೇಕು ಎಂದು ರಾಜ್ಯ ಮಂಡಳಿಯು ಸ್ಥಳೀಯ ಅಧಿಕಾರಿಗಳು ಸೂಚಿಸಿ ಹೇಳಿಕೆ ನೀಡಿದೆ.

                ಶಾಂಘೈನಲ್ಲಿನ ಹೆಚ್ಚಿನ ಪೋಷಕರು, ಜ್ವರದ ಸಮಸ್ಯೆಗಳು ಶೀಘ್ರ ಇನ್ನಷ್ಟು ವ್ಯಾಪಿಸಬಹುದು ಎಂಬ ಆತಂಕ ಕಾಡುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

                 'ಮಾಸ್ಕ್‌ ಧರಿಸಲು ಹಾಗೂ ಆಗಾಗ್ಗೆ ಕೈ ತೊಳೆಯಲು ಮಕ್ಕಳಿಗೆ ಸಲಹೆ ಮಾಡಿದ್ದೇನೆ' ಎಂದು ಪೋಷಕರೊಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು, 'ಮಕ್ಕಳಿಗೆ ಹೆಚ್ಚಿನ ರಕ್ಷಣೆ ಒದಗಿಸುವುದೇ ಈಗಿ ಸವಾಲಾಗಿದೆ' ಎಂದು ಹೇಳಿದರು.

                 ವಿಶ್ವ ಆರೋಗ್ಯ ಸಂಘಟನೆಯು (ಡಬ್ಲ್ಯುಎಚ್‌ಒ) ಎರಡು ದಿನದ ಹಿಂದೆ,ವಸ್ತುಸ್ಥಿತಿ ವರದಿ ಕೇಳಿದ ಬಳಿಕ ಚೀನಾದಲ್ಲಿನ ಪರಿಸ್ಥಿತಿ ಗೊತ್ತಾಗಿದೆ.

               2019 ಕೋವಿಡ್ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ವಸ್ತುಸ್ಥಿತಿ ತಿಳಿಸುವಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳದ ಕುರಿತು ಚೀನಾ, ಡಬ್ಲ್ಯುಎಚ್‌ಒ ತೀವ್ರ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಚೀನಾದ ವುಹಾನ್‌ ಕೋವಿಡ್‌ ಸೋಂಕಿನ ಕೇಂದ್ರ ಬಿಂದುವಾಗಿತ್ತು.

                                          - ಸೋಂಕು ಏರಿಕೆ- ವರದಿ ಸಲ್ಲಿಸಿದ ಚೀನಾ

                   : ಮಕ್ಕಳಲ್ಲಿ ಹೆಚ್ಚುತ್ತಿರುವ ಅನಾರೋಗ್ಯ ಸಮಸ್ಯೆ ಪ್ರಕರಣಗಳನ್ನು ಕುರಿತಂತೆ ತನ್ನ ಸೂಚನೆಗೆ ಸ್ಪಂದಿಸಿ ಚೀನಾ ವರದಿಯನ್ನು ಸಲ್ಲಿಸಿದೆ ಎಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲ್ಯುಎಚ್‌ಒ) ತಿಳಿಸಿದೆ. ವರದಿಯ ಪ್ರಕಾರ ಮೈಕೋಪ್ಲಾಸ್ಮಾ ನ್ಯುಮೋನಿಯಾ ಎಂಬ ಸೋಂಕು ಸಮಸ್ಯೆ ಕಾರಣ. ಮಕ್ಕಳಲ್ಲಿ ಈ ಸೋಂಕು ಸಾಮಾನ್ಯವಾಗಿದ್ದು ಮೇ ತಿಂಗಳಿನಿಂದ ಚೀನಾದಲ್ಲಿ ಗಣನೀಯವಾಗಿ ಕಾಣಿಸಿಕೊಂಡಿದೆ. ಈ ತಿಂಗಳಲ್ಲಿ ಸ್ಥಳಿಯ ಆಡಳಿತಗಳು ಜನತೆಗೆ ಆರೋಗ್ಯ ಕಾಳಜಿ ಕುರಿತು ಮುನ್ನೆಚ್ಚರಿಕೆ ಸಲಹೆಗಳನ್ನು ನೀಡಿದ್ದು ಪರಿಸ್ಥಿತಿಯು ಗಂಭೀರವಾಗಿದೆ ಎಂದು ತಿಳಿಸಿದೆ. ಸೋಂಕು ಬಾಧಿಕ ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ದಟ್ಟಣೆ ಹೆಚ್ಚಾಗಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ವಿಧಿಸಿದಂತೆ ಮುಂಜಾಗ್ರತೆಯಾಗಿ ಶಾಲೆಗಳಿಗೆ ರಜೆ ನೀಡುವುದು ಸೇರಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಈ ಬಾರಿ ತೆಗೆದುಕೊಂಡಿಲ್ಲ. ಜಾಗ್ರತೆ ವಹಿಸಲು ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ಸೂಚನೆಗಳು ಇಲ್ಲ. ಮೆಲ್ಬರ್ನ್‌ನ ಆರೋಗ್ಯ ವಿಜ್ಞಾನ ಸಂಸ್ಥೆಯ ಮುಖ್ಯಸ್ಥ ಬ್ರೂಸ್ ಥಾಂಪ್ಸನ್‌ ಅವರು ಈ ಹಂತದಲ್ಲಿ ಈಗ ಕಾಣಿಸಿರುವ ಸೋಂಕು ಕೋವಿಡ್‌ನ ಹೊಸ ರೂಪಾಂತರ ತಳಿ ಎಂಬ ತೀರ್ಮಾನಕ್ಕೆ ಬರಲು ಪೂರಕವಾದ ಯಾವುದೇ ಅಂಶಗಳಿಲ್ಲ ಎಂದಿದ್ದಾರೆ. ಮುನ್ನೆಚ್ಚರಿಕೆಯ ಕ್ರಮಗಳು ಜಾರಿಯಲ್ಲಿವೆ ಎಂಬುದು ಈ ಹೊತ್ತಿನ ಉತ್ತಮ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries