ಪಟ್ ಅಂತ ಆಹಾರ ರೆಡಿ ಮಾಡಬೇಕು, ಏನು ಮಾಡುವುದು ಎಂದು ಯೋಚಿಸಿದಾಗ ಹೆಚ್ಚಿನವರ ಆಯ್ಕೆ ಸ್ಯಾಂಡ್‌ವಿಚ್. ಪಟ್ ಅಂತ ರೆಡಿಯಾಗುವುದು ಮಾತ್ರವಲ್ಲ ರುಚಿಯೂ ಇರುತ್ತದೆ, ಅಲ್ಲದೆ ಹೊಟ್ಟೆ ಹಸಿವು ಉಂಟಾದಾಗ ಒಂದು ಸ್ಯಾಂಡ್‌ವಿಚ್ ತಿಂದರೆ ಹೊಟ್ಟೆ ತುಂಬುವುದರಿಂದ ಇದನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಸ್ಯಾಂಡ್‌ವಿಚ್ ಆರೋಗ್ಯಕರವೇ, ಅನಾರೋಗ್ಯಕರವೇ ಎಂಬ ಪ್ರಶ್ನೆ ಮೂಡುವುದು. ನೀವು ಯಾವ ಸ್ಯಾಂಡ್‌ವಿಚ್ ಬಳಸುತ್ತೀರಿ ಅದರ ಮೇಲೆ ಆರೋಗ್ಯಕರವೇ , ಅನಾರೋಗ್ಯಕರವೇ ಎಂದು ಹೇಳಬಹುದು.
ನೀವು ಸ್ಯಾಂಡ್‌ವಿಚ್ ಬಳಸುತ್ತೀರಿ ಅದರ ಮೇಲೆ ಆ ಸ್ಯಾಂಡ್‌ವಿಚ್ ಆರೋಗ್ಯಕರವೇ, ಇಲ್ಲವೇ ಎಂದು ಹೇಳಬಹುದು. ಅದರೊಳಗಡೆ ಪೋಷಕಾಂಶವಿರುವ ವಸ್ತುಗಳನ್ನು ಹಾಕಿದರೆ ಆರೋಗ್ಯಕರವಾಗಿರುತ್ತದೆ, ಅದಕ್ಕೆ ಕೊಬ್ಬಿನಂಶವಿರುವ ಆಹಾರ ಹೆಚ್ಚು ಬಳಸಿದರೆ ಅದು ಆರೋಗ್ಯಕರವಲ್ಲ.
ಆರೋಗ್ಯಕರ ಸ್ಯಾಂಡ್‌ವಿಚ್ ಮಾಡುವುದು ಹೇಗೆ?
ನೀವು ಸ್ಯಾಂಡ್‌ವಿಚ್‌ಗೆ ಬಳಸುವ ಬ್ರೆಡ್ ಹೋಲ್ ಗ್ರೈನ್ ಬ್ರೆಡ್ ಬಳಸಿ. ಪ್ರೊಟೀನ್ ವಸ್ತುಗಳಾದ ಟರ್ಕಿ, ಚಿಕನ್ ಬ್ರೆಸ್ಟ್, ಟೋಫು, ಬೀನ್ಸ್, ಸಾಲಮೋನ್, ತುನಾ, ಮೊಟ್ಟೆ ಈ ಬಗೆಯ ವಸ್ತುಗಳನ್ನು ಬಳಸಬಹುದು
ತರಕಾರಿಗಳು, ಹಣ್ಣುಗಳು: ಸೊಪ್ಪು, ಈರುಳ್ಳಿ, ಸೌತೆ, ಟೊಮೆಟೊ, ದುಂಡು ಮೆಣಸು, ಬಾಳೆಹಣ್ಣು, ಸ್ಟ್ರಾಬೆರ್ರಿ ಹೀಗೆ ನಿಮಗೆ ಇಷ್ಟವಾದ ಹಣ್ಣು, ತರಕಾರಿ ಬಳಸಿ.
* ಹರ್ಬ್ಸ್ ಬಳಸಿ
ಯಾವೆಲ್ಲಾ ಸ್ಯಾಂಚ್‌ವಿಚ್‌ಗಳಯ ಆರೋಗ್ಯಕರ
ಮೊಟ್ಟೆ ಸ್ಯಾಂಡ್‌ವಿಚ್
ನಿಮಗೆ ಎಷ್ಟು ಕ್ಯಾಲೋರಿ ಬೇಕೋ ಅಷ್ಟು ಕ್ಯಾಲೋರಿ ಮಾತ್ರ ಬಳಸಿ. ಮೊಟ್ಟೆ ಸ್ಯಾಂಡ್‌ವಿಚ್ ಅನ್ನು ಬೆಳಗ್ಗೆ ಬ್ರೇಕ್‌ಫಾಸ್ಟ್ಗೆ ಬಳಸಿದರೆ ಆ ದಿನಕ್ಕೆ ದೇಹಕ್ಕೆ ಅವಶ್ಯಕವಿರುವ ಪೋಷಕಾಂಶ ದೊರೆಯುತ್ತದೆ.
ವೆಜ್ ಸ್ಯಾಂಡ್‌ವಿಚ್
ವೆಜ್ ಸ್ಯಾಂಡ್‌ವಿಚ್ ತುಂಬಾ ಆರೋಗ್ಯಕರ, ನೀವು ತರಕಾರಿ ಎಷ್ಟು ಬಳಸುತ್ತೀರೋ ಅಷ್ಟು ಒಳ್ಳೆಯದು. ನೀವು ಹರ್ಬ್ಸ್ ಕೂಡ ಸ್ಯಾಂಡ್‌ವಿಚ್‌ನಲ್ಲಿ ಬಳಸಿ.
ನಿಮ್ಮ ಸ್ಯಾಂಡ್‌ವಿಚ್‌ನಲ್ಲಿ ಪ್ರೊಟೀನ್ ಇರಲಿ
ನೀವು ಸ್ಯಾಂಡ್‌ವಿಚ್ ತಯಾರಿಸುವಾಗ ಪ್ರೊಟೀನ್ ಇರಲಿ... ಯಾವುದೇ ಬಗೆಯ ಸ್ಯಾಂಡ್‌ವಿಚ್ ಬಳಸುವುದಾದರೂ ಅದರಲ್ಲಿ ಎಲ್ಲಾ ಆರೋಗ್ಯಕರ ಆಹಾರಗಳಿರಲಿ ಆವಾಗ ಮಾತ್ರ ಅದು ಆರೋಗ್ಯಕರವಾದ ಆಹಾರವಾಗುವುದು.
ಈ ಅಂಶಗಳ ಕಡೆ ಗಮನಹರಿಸಿ
ಬ್ರೆಡ್: ನೀವು ದವಸಧಾನ್ಯಗಳ ಬ್ರೆಡ್ ಬಳಸಿ. ಇತರ ಬ್ರೆಡ್ ಬಳಸಿದರೆ ಅದು ದೇಹದಲ್ಲಿ ಸಕ್ಕರೆಯಂಶ ಹೆಚ್ಚಿಸುತ್ತದೆ.
ಸ್ಯಾಚುರೇಟಡ್ ಫ್ಯಾಟ್ ಕಡಿಮೆ ಬಳಸಿ
ಚೀಸ್, ಸ್ಯಾಚುರೇಟಡ್ ಮಾಂಸವನ್ನು ಮಿತಿವಾಗಿ ಬಳಸಿ. ನೀವು ಸ್ಯಾಚುರೇಟಡ್ ಮಾಂಸ ಬಳಸಬೇಡಿ, ಫ್ರೆಷ್ ಮಾಂಸ ತಂದು ಬಳಸಿ.