HEALTH TIPS

ಕಣ್ಣೂರಿನಲ್ಲಿ ಗುಂಡಿನ ದಾಳಿ; ನಕ್ಸಲ್ ಮತ್ತು ಥಂಡರ್ಬೋಲ್ಟ್ ಘರ್ಷಣೆ; ಇಬ್ಬರಿಗೆ ಗಾಯ

             ಕಣ್ಣೂರು: ಕಣ್ಣೂರಿನಲ್ಲಿ ನಕ್ಸಲ್ ಭಯೋತ್ಪಾದಕರು ಮತ್ತು ಥಂಡರ್ ಬೋಲ್ಟ್ ನಡುವೆ ಗುಂಡಿನ ಚಕಮಕಿ ನಡೆದಿದೆ. ಅಯ್ಯನಕುನ್ನು ಉರುಪುಕುಟ್ಟಿ ಅರಣ್ಯದಲ್ಲಿ ಎನ್‍ಕೌಂಟರ್ ನಡೆದಿದೆ.

               ಈ ಪ್ರದೇಶದಲ್ಲಿ ಹತ್ತು ನಿಮಿಷಗಳ ಕಾಲ ನಿರಂತರವಾಗಿ ಗುಂಡಿನ ಸದ್ದು ಕೇಳಿಸಿದೆ  ಎಂದು ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ. ಥಂಡರ್‍ಬೋಲ್ಟ್‍ನ ಗಸ್ತಿನ ವೇಳೆ ಈ ಎನ್‍ಕೌಂಟರ್ ನಡೆದಿದೆ. ನಕ್ಸಲ್ ಭಯೋತ್ಪಾದಕರ ಉಪಸ್ಥಿತಿಯಿಂದಾಗಿ ಹೆಚ್ಚಿನ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿವೆ. ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಥಂಡರ್ಬೋಲ್ಟ್ ಈ ಪ್ರದೇಶದಿಂದ ಮೂರು ಬಂದೂಕುಗಳನ್ನು ವಶಪಡಿಸಿಕೊಂಡಿದೆ. ಗಸ್ತು ತಿರುಗುತ್ತಿದ್ದ ವೇಳೆ ನಕ್ಸಲ್ ತಂಡ ಮೊದಲು ಗುಂಡು ಹಾರಿಸಿದ್ದಾರೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries