ಕಣ್ಣೂರು: ಕೇರಳ ನಕ್ಸಲರ ಪ್ರಧಾನ ಚಟುವಟಿಕೆ ಕೇಂದ್ರವಗಿ ಬದಲಾಗುತ್ತಿರುವ ಬಗ್ಗೆ ಕೇಂದ್ರ ಗುಪ್ತಚರ ವಿಭಾಗ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.ಕೇರಳದ ಕೆಲವು ಜಿಲ್ಲೆಗಳಲ್ಲಿ ಅಲ್ಲದೆ ನೆರೆಯ ಕರ್ನಾಟಕ, ತಮಿಳ್ನಾಡಿನಲ್ಲೂ ನಕ್ಸಲ್ ಚಟುವಟಿಕೆ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ತೆಲಂಗಾಣ, ಛತ್ತೀಸ್‍ಗಡದಂತೆ ಕೇರಳದ ಕೆಲವು ಜಿಲ್ಲೆಗಳಲ್ಲೂ ತಮ್ಮ ನೆಲೆ ಕಂಡುಕೊಳ್ಳಲು ನಕ್ಸಲರು ಯತ್ನಿಸುತ್ತಿದ್ದಾರೆ. ವಯನಾಡ್, ಮಲಪ್ಪುರಂ, ಪಾಲಕ್ಕಾಡ್ ಅಲ್ಲದೆ ಕಣ್ಣೂರು ಜಿಲ್ಲೆಯಲ್ಲಿ, ಕರ್ನಾಟಕ ಗಡಿ ಪ್ರದೇಶದ ಅರಣ್ಯಗಳಿಗೆ ಹೊಂದಿಕೊಂಡು ನಕ್ಸಲ್ ಚಟುವಟಿಕೆ ನಡೆಸಲಾಗುತ್ತಿದೆ.
ದೇಶದ 70ಜಿಲ್ಲೆಗಳನ್ನು ನಕ್ಸಲ್ ಬಾಧಿತ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಇವುಗಳಲ್ಲಿ ಕೇರಳದ ವಯನಾಡ್, ಮಲಪ್ಪುರಂ, ಪಾಲಕ್ಕಾಡ್ ಜಿಲ್ಲೆಯೂ ಒಳಗೊಂಡಿದೆ. ಬುಡಕಟ್ಟು ಜನಾಂಗದವರನ್ನು ಕೇಂದ್ರೀಕರಿಸಿ ನಕ್ಸಲರು ಚಟುವಟಿಕೆ ನಡೆಸುತ್ತಿದ್ದು, ಇಂತಹ ಪ್ರದೇಶದ ಕಾಲೇಝು ವಿದ್ಯಾರ್ಥಿಗಳಲ್ಲಿ ನಕ್ಸಲ್ ಆಶಯ ಬಿತ್ತಿ, ಇವರನ್ನು ತಮ್ಮೆಡೆಗೆ ಆಕರ್ಷಿಸಿಕೊಳ್ಳುತ್ತಿದ್ದಾರೆ.ನಕ್ಸಲ್ ಪೀಪಲ್ಸ್ ಆಪರೇಶನ್ ಗೆರಿಲ್ಲಾ ಆರ್ಮಿ ಘಟಕವನ್ನು ಪಶ್ಚಿಮಘಟ್ಟಗಳಲ್ಲೂ ರಚಿಸಿಕೊಂಡಿದ್ದಾರೆ. ಮಾರಕಾಯುಧಗಳನ್ನು ಹೊಂದಿರುವ ನಕ್ಸಲ್ ತಂಡ ಕೇರಳದ ನಕ್ಸಲರಿಗೂ ತರಬೇತಿ ನೀಡುತ್ತಿದ್ದಾರೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.