ಚೆನ್ನೈ: ಶಬರಿಮಲೆ ಯಾತ್ರೆಗೆ ವಿಮಾನದಲ್ಲಿ ಆಗಮಿಸುವ ಅಯ್ಯಪ್ಪ ಭಕ್ತರಿಗೆ ನಾಗರಿಕ ವಿಮಾನಯಾನ ಇಲಾಖೆ ರಿಯಾಯಿತಿ ನೀಡಿದೆ.
ವಿಮಾನದಲ್ಲಿ ಕೇರಳಕ್ಕೆ ಆಗಮಿಸುವ ಭಕ್ತರು ತುಪ್ಪ ಮತ್ತು ತೆಂಗಿನಕಾಯಿಯನ್ನು ಕೊಂಡೊಯ್ಯಬಹುದು. ಪ್ರಯಾಣಿಕರಿಗೆ ತೆಂಗಿನಕಾಯಿ ಕೊಂಡೊಯ್ಯಲು ಯಾವುದೇ ಅಡ್ಡಿಯಿಲ್ಲ ಮತ್ತು ಜನವರಿ 15 ರವರೆಗೆ ಮಾತ್ರ ಈ ಅನುಮತಿ ಇರುತ್ತದೆ ಎಂದು ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನಿಂದ ಕೇರಳಕ್ಕೆ ಬರುವ ಭಕ್ತರಿಗೆ ವಿನಾಯಿತಿ ನೀಡಲಾಗಿದೆ.
ಸಾಮಾನ್ಯವಾಗಿ, ಸುಡುವ ಸಾಧ್ಯತೆಗಳಿರುವ ವಸ್ತುಗಳನ್ನು ವಿಮಾನದಲ್ಲಿ ಸಾಗಿಸಲು ಅನುಮತಿಸಲಾಗುವುದಿಲ್ಲ. ಎಣ್ಣೆಯ ಅಂಶ ಹೆಚ್ಚಿರುವುದರಿಂದ ತುಪ್ಪ ತುಂಬಿರುವ ಕೊಬ್ಬರಿಯನ್ನೂ ನಿಷೇಧಿಸಲಾಗಿತ್ತು. ಆದರೆ ಅಯ್ಯಪ್ಪ ಭಕ್ತರ ಬೇಡಿಕೆಯನ್ನು ಪರಿಗಣಿಸಿ ನಾಗರಿಕ ವಿಮಾನಯಾನ ಇಲಾಖೆ ಇದನ್ನು ಸಡಿಲಿಸಿದೆ.
ಚೆನ್ನೈ ಹಾಗೂ ಸುತ್ತಮುತ್ತಲ ಪ್ರದೇಶಗಳ ಕೇರಳೀಯರು ಸೇರಿದಂತೆ ಸಾವಿರಾರು ಜನರು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಬಸ್ಸುಗಳು, ರೈಲುಗಳು ಮತ್ತು ಖಾಸಗಿ ವಾಹನಗಳಲ್ಲದೆ, ಅನೇಕ ಜನರು ವಿಮಾನದಲ್ಲಿಯೂ ಪ್ರಯಾಣಿಸುತ್ತಾರೆ. ಪ್ರಯಾಣಕ್ಕೆ ವಿಮಾನ ಆಯ್ಕೆಗೊಳಿಸುವವರಿಗೆ ತೆಂಗಿನಕಾಯಿ ಪ್ಯಾಕ್ ಮಾಡದೆ ಇರಲು ಸಾಧ್ಯವಿಲ್ಲ. ತೆಂಗಿನಕಾಯಿಯನ್ನು ವಿಮಾನದಲ್ಲಿ ಕೊಂಡೊಯ್ಯಲು ಅನುಮತಿಸದಿರುವುದು ವಿವಿಧ ಸ್ಥಳಗಳಲ್ಲಿ ಸಾಕಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ನಾಗರಿಕ ವಿಮಾನಯಾನ ಅಧಿಕಾರಿಗಳ ನಿರ್ಧಾರ ಇದಕ್ಕೆ ಪರಿಹಾರ ಒದಗಿಸಿದೆ.
ಹೆಚ್ಚಿನ ಜನರು ಚೆನ್ನೈನಿಂದ ಕೊಚ್ಚಿಗೆ ಟಿಕೆಟ್ ತೆಗೆದುಕೊಂಡಿದ್ದಾರೆ. ಇವರಲ್ಲಿ ಹಲವರು ಕೊಚ್ಚಿಯಿಂದ ರಸ್ತೆ ಮಾರ್ಗವಾಗಿ ಪಂಪಾ ತಲುಪುತ್ತಾರೆ. ಚೆನ್ನೈ ನಗರದಿಂದ ಕೊಚ್ಚಿಗೆ ಪ್ರತಿದಿನ ಐದು ವಿಮಾನಗಳಿವೆ. ಮಂಡಲ ಪೂಜೆ ಆಂಭವಾದಾಗಿನಿಂದ ಟಿಕೆಟ್ ಗೆ ಬೇಡಿಕೆ ಹೆಚ್ಚಿದೆ. ಅಯ್ಯಪ್ಪ ಭಕ್ತರು ಕೊಚ್ಚಿಯಲ್ಲದೆ ತಿರುವನಂತಪುರಂ ವಿಮಾನ ನಿಲ್ದಾಣದ ಮೂಲಕವೂ ಆಗಮಿಸುತ್ತಾರೆ.