ಎರ್ನಾಕುಳಂ: ಕೇರಳದ ಹಿರಿಯ ಕನ್ನಡ ಪರ ಸಂಸ್ಥೆ ಕೊಚ್ಚಿ ಕನ್ನಡ ಸಂಘ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿಯನ್ನು ಸಂಘದ ಕೊಚ್ಚಿಯ ಕಚೇರಿಯಲ್ಲಿ ಆಚರಿಸಲಾಯಿತು
ಹಿರಿಯ ಕನ್ನಡ ಸಂಘಟಕ ಹಾಗೂ ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ ಆನವಟ್ಟಿ ಸಮಾರಂಭ ಉದ್ಘಾಟಿಸಿದರು. ಕೊಚ್ಚಿನ್ ಕನ್ನಡ ಸಂಘದ ಅಧ್ಯಕ್ಷ ಡಿ ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕನ್ನಡ ಸಂಘಟಕ ಗಿರೀಶ್ ಪಡ್ಕೆ ರಾಜ್ಯೋತ್ಸವ ಸಂದೇಶ ಹಾಗೂ ಲೇಖಕಿ, ಕೊಚ್ಚಿನ್ ಕನ್ನಡ ಸಂಘದ ಜೊತೆ ಕಾರ್ಯದರ್ಶಿ ಪರಿಣಿತ ರವಿ ದೀಪಾವಳಿ ಸಂದೇಶ ನೀಡಿದರು
ಹಿರಿಯ ಕನ್ನಡಿಗ ಕೊಚ್ಚಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ರೀಕಾಂತ ಕೌಡಿ ಅವರು ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆಗೈದರು. ನಗರದ ಹಿರಿಯ ವೈದ್ಯ, 2023ನೇ ಸಾಲಿನ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕøತ ಡಾ. ಮಲ್ಲಿಕಾರ್ಜುನ ಎಸ್ ನಾಸಿ ಅತಿಥಿಗಳನ್ನು ಸನ್ಮಾನಿಸಿದರು. ಕೊಚ್ಚಿಯ ಮೆಡಿಕಲ್ ಟ್ರಸ್ಟ್ ಆಸ್ಪತ್ರೆ ಹಿರಿಯ ವೈದ್ಯ ಡಾ ಭಾಸ್ಕರ್ ರಾವ್, ಆರ್ಥಿಕ ತಜ್ಞ ಪಿ ಕೆ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಸಿದರು. ಜಗನಾಥ, ತ್ಯಾಗರಾಜ್,ಸುನಂದಾ ಆನವಟ್ಟಿ, ಸುಭಾಷ್ ಗೌಡ, ನಾಗರಾಜ್, ವೆಂಕಟೇಶ್, ರವಿ, ಮೋಹನ್, ಗಂಗಾಧರ, ಸೋಮನಾಥ ಕೌಡಿ,ಮಹೇಶ್ ಮಟ್ಟಾನ್ಚೇರಿ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಮಾಜಿ ಅಧ್ಯಕ್ಷ ವಿಜಯ ಕುಮಾರ ತಂತ್ರಿ ಕನ್ನಡ ಧ್ವಜಾರೋಹಣಗೈದರು ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಸ್ವಾಗತಿಸಿದರು. ಜ್ಯೋತಿ ತಂತ್ರಿ ಹಾಗೂ ರಾಜಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ವಿಷ್ಣು ತಂತ್ರ ವಂದಿಸಿದರು.