ಟೆಲ್ ಅವೀವ್: ಗಾಜಾದ ಶಿಫಾ ಆಸ್ಪತ್ರೆ ಸಂಕೀರ್ಣದಲ್ಲಿ ಹಮಾಸ್ ಭಯೋತ್ಪಾದಕ ಸುರಂಗ ಮಾರ್ಗವನ್ನು ಪತ್ತೆಹಚ್ಚಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿಕೊಂಡಿದೆ.
ಟೆಲ್ ಅವೀವ್: ಗಾಜಾದ ಶಿಫಾ ಆಸ್ಪತ್ರೆ ಸಂಕೀರ್ಣದಲ್ಲಿ ಹಮಾಸ್ ಭಯೋತ್ಪಾದಕ ಸುರಂಗ ಮಾರ್ಗವನ್ನು ಪತ್ತೆಹಚ್ಚಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಹೇಳಿಕೊಂಡಿದೆ.
ಮತ್ತೊಂದು ಪೋಸ್ಟ್‌ನಲ್ಲಿ, 'ರಾಂಟಿಸಿ ಆಸ್ಪತ್ರೆಯೊಳಗೆ, ಮತ್ತೊಂದು ಭಯೋತ್ಪಾದಕ ಸುರಂಗ ಮಾರ್ಗವನ್ನು ಐಡಿಎಫ್ ಪಡೆಗಳು ಪತ್ತೆಹಚ್ಚಿವೆ' ಎಂದು ಹೇಳಿದೆ.
ಕಳೆದ 24 ಗಂಟೆಗಳಲ್ಲಿ ಶಾಲ್ದಾಗ್ ಎಸ್‌ಎಫ್ ಘಟಕ, 7ನೇ ಬ್ರಿಗೇಡ್, ಮತ್ತು ಹೆಚ್ಚುವರಿ ಎಸ್‌ಎಫ್ ಘಟಕಗಳು ಶಿಫಾ ಆಸ್ಪತ್ರೆಯೊಳಗೆ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿವೆ. ಅಲ್ಲದೇ ಅಲ್-ಕುಡ್ಸ್ ಆಸ್ಪತ್ರೆಯೊಳಗೆ ಹಮಾಸ್ ಉಗ್ರರು ಅ.7ರ ದಾಳಿಗೆ ಸಿದ್ಧಪಡಿಸಿದ್ದ ಬೂಬಿ-ಟ್ರ್ಯಾಪ್ಡ್ ವಾಹನವನ್ನು ಸಹ ಪತ್ತೆ ಮಾಡಲಾಗಿದೆ.
ಇದರಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿವೆ ಎಂದು ಇಸ್ರೇಲ್ ಏರ್ ಫೋರ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.