ಕುಂಬಳೆ: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ) ಸಿಪಿಸಿಆರ್‍ಐ ಕಾಸರಗೋಡು ವತಿಯಿಂದ ಫೀಲ್ಡ್ ಡೇ ಕಮ್ ಹಾರ್ವೆಸ್ಟ್ ಫೆಸ್ಟಿವಲ್ ಕುಂಬಳೆ ಗ್ರಾಮ ಪಂಚಾಯಿತಿಯ ಬಂಬ್ರಾಣದಲ್ಲಿ ಜರುಗಿತು. ಐಸಿಎಆರ್-ಸಿಪಿಸಿಆರ್‍ಐ ಕಾಸರಗೋಡು ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಭತ್ತದ ಪೈರು ಕಟವು ನಡೆಸುವ ಮೂಲಕ ಉದ್ಘಾಟಿಸಿದರು
ಬಂಬ್ರಾಣದಲ್ಲಿ ಕೃಷಿ ವಿಜ್ಞಾನ ಕೇಂದ್ರವು ಅನುಷ್ಠಾನಗೊಳಿಸುತ್ತಿರುವ 'ಕೆವಿಕೆ ಆನ್ ಡ್ರೋನ್' ತಂತ್ರಜ್ಞಾನದ ಮುಂಚೂಣಿಯ ಪ್ರಾತ್ಯಕ್ಷಿಕೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 2023 ಸೆಪ್ಟಂಬರ್‍ನಲ್ಲಿ 35 ರೈತರಿಗೆ ಸೇರಿದ 55 ಎಕರೆ ವಿಸ್ತೀರ್ಣದ ಭತ್ತದ ಗದ್ದೆಯಲ್ಲಿ ಪ್ರಾತ್ಯಕ್ಷಿಕೆಯನ್ನು ನಡೆಸಲಾಗಿತ್ತು. ನಾಟಿ ಮಾಡಿದ 40 ರಿಂದ 50 ದಿನಗಳ ನಂತರ ಭತ್ತದಲ್ಲಿ ಡ್ರೋನ್ ಬಳಸಿ ಮೈಕ್ರೋ ನ್ಯೂಟ್ರಿಯೆಂಟ್ ದ್ರಾವಣವನ್ನು ಸಿಂಪಡಿಸುವ ತಂತ್ರಜ್ಞಾನವನ್ನೂ ಪ್ರದರ್ಶಿಸಲಾಗಿತ್ತು.
ಅಕ್ಕಿಯಲ್ಲಿನ ಸೂಕ್ಷ್ಮ ಪೆÇೀಷಕಾಂಶಗಳ ಕೊರತೆ ನೀಗಿಸುವುದು, ಹೆಚ್ಚಿನ ದಾನ್ಯ, ಹೆಚ್ಚಿನ ಉತ್ಪಾದಕತೆ ಮತ್ತು ಕಡಿಮೆ ಕಾರ್ಮಿಕರ ಬಳಕೆಯೊಂದಿಗೆ ಸಿಂಪಡಣೆ ಬಗ್ಗೆ ಪ್ರದರ್ಶನವನ್ನು ಹೆಚ್ಚು ಯಶಸ್ವಿಯಾಗುವಂತೆ ಮಾಡಲಾಗಿತ್ತು. ಕೆ.ವಿ.ಕೆ. ಮುಖ್ಯಸ್ಥ ಡಾ.ಮನೋಜಕುಮಾರ್ ಅವರು ಪ್ರಾತ್ಯಕ್ಷಿಕೆಯಲ್ಲಿ ಕೈಗೊಂಡಿರುವ ಕಾರ್ಯಚಟುವಟಿಕೆಗಳನ್ನು ವಿವರಿಸಿದರು ಮತ್ತು ಬಂಬ್ರಾಣ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಕೃಷಿ ಭವನ ಕುಂಬಳೆ ಗ್ರಾಮ ಪಂಚಾಯಿತಿ ಕೃಷಿ ಅಧಿಕಾರಿ ಬಿಂದು, ಡಾ.ಬೆಂಜಮಿನ್ ಮ್ಯಾಥ್ಯೂ, ಎಸ್‍ಎಂಎಸ್, ಕೆ.ಮಣಿಕಂಠನ್, ಕಾರ್ಯಕ್ರಮ ಸಹಾಯಕ ಕೆವಿಕೆ ಕಾಸರಗೋಡು ಹಾಗೂ ಪ್ರಗತಿಪರ ರೈತರು ಫೀಲ್ಡ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.