ಕೊಲ್ಲಂ: ಓಯೂರ್‍ನಿಂದ ಅಪರಿಚಿತ ತಂಡದಿಂದ ಅಪಹರಣಕ್ಕೊಳಗಾಗಿದ್ದ ಅಬಿಗೈಲ್ ಪತ್ತೆಯಾಗಿದ್ದಾಳೆ. ಆರೋಪಿಗಳು ಮಗುವನ್ನು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಕೊಲ್ಲಂ ಆಶ್ರಮ ಮೈದಾನದಲ್ಲಿ ಮಗು ಪತ್ತೆಯಾಗಿದೆ. ಮಗುವನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪೋಷಕರಿಗೆ ಒಪ್ಪಿಸಲಾಗುವುದು.
20 ಗಂಟೆಗಳ ಸುದೀರ್ಘ ಹುಡುಕಾಟದ ನಂತರ ಮಗು ಪತ್ತೆಯಾಗಿದೆ. ನಿನ್ನೆ ಸಂಜೆ ಆರು ವರ್ಷದ ಅಬಿಗೈಲ್ ಎಂಬಾಕೆಯನ್ನು ಕಾರಿನಲ್ಲಿ ಬಂದ ತಂಡ ಅಪಹರಿಸಿತ್ತು. ಹಿರಿಯ ಮಗ ಜೊನಾಥನ್ ಜೊತೆ ಟ್ಯೂಷನ್ ಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ತಡೆಯಲು ಯತ್ನಿಸಿದ ಜೋನಾಥನ್ ನನ್ನು ಹೊಡೆದು ಬೀಳೀಸಲಾಗಿತ್ತು. ದೂರಿನ ಆಧಾರದ ಮೇಲೆ ಪೂಯಪಲ್ಲಿ ಪೆÇಲೀಸರು ತನಿಖೆ ನಡೆಸಿದ್ದರು.
ಪೇಪರೊಂದನ್ನು ತೋರಿಸಿ ತಾಯಿಗೆ ಕೊಡಲು ಕಾರಲ್ಲಿದ್ದ ಆಗಂತುಕರು ಸಹೋದರನಿಗೆ ತಿಳಿಸಿದ್ದರು. ಬಾಲಕಿಯನ್ನು ಕಾರಿನೊಳಗೆ ಎಳೆದು ಪಲಾಯನ ಮಾಡಿದ್ದಾಗಿ ಬಾಲಕ ಹೇಳಿದ್ದ.
ಏತನ್ಮಧ್ಯೆ, ಪೆÇಲೀಸರು ಆರೋಪಿಗಳಿಗಾಗಿ ಹುಡುಕಾಟ ಮುಂದುವರಿಸಿದ್ದರು. ಆಶ್ರಮ ಮೈದಾನದ ಆವರಣವನ್ನು ಸಿಸಿಟಿವಿ ಕ್ಯಾಮರಾಗಳ ಮೂಲಕ ಪರಿಶೀಲಿಸಲಾಗುತ್ತಿದೆ. ಅಪಹರಣಕಾರರು 5 ಲಕ್ಷ ರೂ. ಬೇಡಿಕೆ ಇರಿಸಿದ್ದರು.