ಕುಂಬಳೆ: ಕೇರಳದಾದ್ಯಂತ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ನಡೆಯುತ್ತಿರುವ ಜನಪಂಚಾಯತಿ ಸಾರ್ವಜನಿಕ ಸಭೆಯು ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿಯ ಆಶ್ರಯದಲ್ಲಿ ಕುಂಬಳೆ ಪೇಟೆಯಲ್ಲಿ ನಡೆಯಿತು.
ಕುಂಬಳೆ ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿ ಕೇಂದ್ರದ ಜನೋಪಯೋಗಿ ಯೋಜನೆಗಳನ್ನು ಹೆಸರು ಬದಲಾಯಿಸಿ ತಮ್ಮ ಸಾಧನೆಗಳಾಗಿ ಪಿಣರಾಯಿ ಸರ್ಕಾರವು ಪ್ರಚಾರ ಮಾಡುತ್ತಿದ್ದು ಈ ಬಗ್ಗೆ ಕಾರ್ಯಕರ್ತರು ಜನರನ್ನು ಜಾಗೃತರನ್ನಾಗಿ ಮಾಡಬೇಕೆಂದು ಕರೆ ನೀಡಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ಮಣಿಯಂಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯ ಮುರಳಿಧರ ಯಾದವ್ ನಾಯ್ಕಾಪು ಮಾತನಾಡಿ ಮುಸ್ಲಿಂ ಲೀಗ್ ಆಡಳಿತ ನಡೆಸುತ್ತಿರುವ ಕುಂಬಳೆ ಪಂಚಾಯತಿ ಆಡಳಿತದ ನ್ಯೂನ್ಯತೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಮಾಜಿ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ನೇತಾರ ವಿ ರವೀಂದ್ರನ್ ಕುಂಬಳೆ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ, ಮಂಡಲ ಉಪಾಧ್ಯಕ್ಷರುಗಳಾದ ಪ್ರೇಮಲತಾ ಗಟ್ಟಿ, ರಮೇಶ್ ಭಟ್ ಕುಂಬಳೆ, ಕಾರ್ಯದರ್ಶಿ ಸುಧಾಕರ್ ಕಾಮತ್, ಸ್ವಾಗತ್ ಸೀತಾಂಗೋಳಿ, ಓಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು, ಯುವಮೋರ್ಛಾ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್, ಯುವ ಮೋರ್ಚಾ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಅಜಿತ್ ಮತ್ತು ಪಕ್ಷದ ಜನಪ್ರತಿನಿಧಿಗಳು ಕಾರ್ಯಕರ್ತರು ಸಹಿತ ಸ್ಥಳೀಯರು ಭಾಗವಹಿಸಿದ್ದರು.
ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಬಂಬ್ರಾಣ ಸ್ವಾಗತಿಸಿ, ಕುಂಬಳೆ ದಕ್ಷಿಣ ವಲಯ ಪ್ರಧಾನ ಕಾರ್ಯದರ್ಶಿ ಜಿತೇಶ್ ನಾಯ್ಕಾಪು ವಂದಿಸಿದರು.