ಪೆರ್ಲ : ರಂಗ ಡಿಂಡಿಮ ಪೆರ್ಲ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪೆರ್ಲ ಸ. ನಾ.ಶಾಲೆಯ ಕಲಾನಿಲಯದಲ್ಲಿ ಜರಗಿತು.
ಹಿರಿಯ ರಂಗನಟ-ಶಿಕ್ಷಣ ತಜ್ಞ-ನಿವೃತ್ತ ಪ್ರಾಶುಂಪಾಲ ಯತೀಶ್ ಕುಮಾರ್ ರೈ ಮುಳ್ಳೇರಿಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ ಥಿಯೇಟರ್ ಡ್ರಾಮದಂತಹ ರಂಗ ಕಲೆಗಳಿಂದಾಗಿ ಮಕ್ಕಳು ಪರಿಣಾಮಕಾರಿ ಬದಲಾವಣೆ ಹೊಂದುತ್ತಿದ್ದು ಇದು ಭವಿಷ್ಯಕ್ಕೆ ಪೂರಕವಾಗುತ್ತಿದೆ. ಗಡಿನಾಡದ ಕಾಸರಗೋಡು ಜಿಲ್ಲೆಯಿಂದ ಕನ್ನಡ ಭಾಷೆಯ ಡಿಂಡಿಮ ಬಾರಿಸಲು,ಮಕ್ಕಳ ರಂಗಾಭಿನಯದ ಪ್ರತಿಭೆ ಅಭಿವ್ಯಕ್ತಪಡಿಸಲು ಸಂಘಟನಾತ್ಮಕ ಪ್ರೋತ್ಸಾಹ ಅಭಿನಂದನಾರ್ಹ ಎಂದರು.
ನಾಟಕ ಕರ್ತೃ,ರಂಗ ನಿರ್ದೇಶಕ, ಶಿಕ್ಷಕ ಉದಯ ಸಾರಂಗ್ ಸಭೆಯ ಅಧ್ಯಕ್ಷತೆವಹಿಸಿದ್ದರು.ಡಾ.ಆಶಾಲತಾ ಚೇವಾರು,ಸದಾಶಿವ ಭಟ್ ಹರಿನಿಲಯ,ಮೊಹಮ್ಮದಾಲಿ ಪೆರ್ಲ,ಉದಯ ಚೆಟ್ಟಿಯಾರ್ ಪೆರ್ಲ, ಸುಧಾಕರ ಮಾಸ್ತರ್ ಕಾಟುಕುಕ್ಕೆ ,ಅಜಯ್ ಪೈ ಅಮೆಕ್ಕಳ, ಕೃಷ್ಣಪ್ಪ ಬಂಬಿಲ, ನೂತನ ಅಧ್ಯಕ್ಷ ರಾಜೇಶ್ ಬಜಕೂಡ್ಲು ಸಭೆಯಲ್ಲಿ ಉಪಸ್ಥಿತರಿರುವರು.ಈ ಸಂದರ್ಭದಲ್ಲಿ 2023-24ನೇ ಸಾಲಿನ ಮಕ್ಕಳ ನಾಟಕೋತ್ಸವ 'ಕಣ್ಣಾ ಮುಚ್ಚೆ ಕಾಡೆ ಕೂಡೆ ' ರಂಗಾಭಿನಯ ತರಬೇತಿಗೆ ಚಾಲನೆ,ವಾರ್ಷಿಕ ಸದಸ್ಯತ್ವ ವಿತರಣೆ ನಡೆಯಿತು. ರಂಗ ಡಿಂಡಿಮ ತಂಡದಿಂದ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಅವರ ನೇತೃತ್ವದಲ್ಲಿ ರಂಗಗೀತೆಗಳನ್ನು ಹಾಡಿದರು.ನಯನ,ಭವ್ಯ,ಸಹನಾ ಪ್ರಾರ್ಥನೆಗೈದರು.ಸಂಘಟಕ ಜಯ ಮಣಿಯಂಪಾರೆ ಪ್ರಾಸ್ತವನೆಗೈದರು. ವಿನೋದ ಪೆರ್ಲ ಸ್ವಾಗತಿಸಿ ಸದಾನಂದ ಸೂರ್ಡೇಲು ವಂದಿಸಿದರು. ಮಮತಾ ನಲ್ಕ ಕಾರ್ಯಕ್ರಮ ನಿರೂಪಿಸಿದರು.