HEALTH TIPS

ಕೇರಳಕ್ಕೆ ಸಂತಸದ ಸುದ್ದಿ; ತಿರುವನಂತಪುರಂ-ಕಾಸರಗೋಡು ವಂದೇಭಾರತದಲ್ಲಿ ಹೊಸ ಬದಲಾವಣೆಗಳು; ವಿಮಾನಯಾನದಂತಹ ಪ್ರಯಾಣದ ಅನುಭವವನ್ನು ಒದಗಿಸಲು ದಕ್ಷಿಣ ಭಾರತದಲ್ಲಿ ಪ್ರಾಯೋಗಿಕ ಯೋಜನೆ

                 

             ನವದೆಹಲಿ: ಪ್ರಯಾಣಿಕರಿಗೆ ಒದಗಿಸುವ ಸೇವೆಯನ್ನು ವಿಶ್ವದರ್ಜೆಗೆ ಏರಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಪ್ರಯತ್ನ ಪ್ರಗತಿಯಲ್ಲಿದೆ.

             ವಂದೇಭಾರತದಲ್ಲಿ ಪ್ರಯಾಣದ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ದಕ್ಷಿಣ ರೈಲ್ವೆ ಮುಂದಿನ ಹೊಸ ಯೋಜನೆಯನ್ನು ಪ್ರಾರಂಭಿಸುತ್ತಿದೆ. ಪ್ರಾಯೋಗಿಕ ಯೋಜನೆಯನ್ನು 'ಯಾತ್ರಿ ಸೇವಾ ಅಪ್ಪಂದ್' (ವೈ.ಎಸ್.ಎ) ಎಂದು ಕರೆಯಲಾಗುತ್ತದೆ. ಮೊದಲ ಹಂತದಲ್ಲಿ ದಕ್ಷಿಣ ಭಾರತದಲ್ಲಿ ಆರು ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲುಗಳನ್ನು ಯೋಜನೆಯಲ್ಲಿ ಸೇರಿಸಲಾಗುವುದು.

               'ಯಾತ್ರಿ ಸೇವಾ ಅನುಬಂಧ ಯೋಜನೆ'ಯಲ್ಲಿ ಸೇರಿಸುವ ಮೂಲಕ ವಂದೇ ಭಾರತ್‍ನಲ್ಲಿ ಮಾಡಬೇಕಾದ ಬದಲಾವಣೆಗಳು:

ಆಕರ್ಷಿಸುವ ಮೆನು, ಹೆಚ್ಚು ಆಹಾರ ಮತ್ತು ಪಾನೀಯಗಳು 

ಪ್ರಯಾಣಿಕರಿಗೆ ಅಗತ್ಯ ವಸ್ತುಗಳನ್ನು ಒದಗಣೆ

ರೈಲು ನಿಲ್ದಾಣಕ್ಕೆ ಮತ್ತು ಅಲ್ಲಿಂದ ತೆರಳಲು ರೈಲ್ವೆಯ ಕ್ಯಾಬ್ ಸೇವೆ

ಗಾಲಿಕುರ್ಚಿ ಸಹಾಯವನ್ನು ಒದಗಣೆ 

ಪ್ರಯಾಣದ ಸಮಯದಲ್ಲಿ ಇನ್ಫೋಟೈನ್ಮೆಂಟ್ ತಯಾರಿ

ಪ್ರತಿ ಕೋಚ್‍ನಲ್ಲಿ ಹೌಸ್‍ಕೀಪಿಂಗ್ ಸಿಬ್ಬಂದಿ. (ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ, ಅಖಿಲ ಭಾರತ ಸ್ಥಳೀಯಾಡಳಿತ ಸಂಸ್ಥೆ ಅಥವಾ ಹಾಸ್ಪಿಟಾಲಿಟಿ ಮತ್ತು ಹೌಸ್‍ಕೀಪಿಂಗ್‍ನಲ್ಲಿ ಯಾವುದೇ ಸರ್ಕಾರಿ ಸಂಸ್ಥೆಯಿಂದ ತರಬೇತಿ ಪಡೆದವರಿಗೆ)

ಆತಿಥ್ಯ, ಹೋಟೆಲ್ ನಿರ್ವಹಣೆ ಮತ್ತು ಆಹಾರ ಮತ್ತು ಪಾನೀಯಗಳನ್ನು ಪೂರೈಸಲು ಕನಿಷ್ಠ ಡಿಪೆÇ್ಲಮಾ ಅಥವಾ ಪದವಿ ಹೊಂದಿರುವ ಗುತ್ತಿಗೆದಾರರನ್ನು ನೇಮಕ. ಇದು ವಿಮಾನದಲ್ಲಿರುವಂತಹ ಸೌಲಭ್ಯ ಒದಗಿಸಲಿದ್ದು, ಯಾವುದೇ ಧೂಮಪಾನ ಅಥವಾ ಮದ್ಯಪಾನ ಬಳಕೆ ರಹಿತತೆಯನ್ನು  ಖಚಿತಪಡಿಸುತ್ತದೆ.

      ಪ್ರಾಯೋಗಿಕ ಯೋಜನೆಯಡಿ ವಂದೇ ಭಾರತ್ ಮಾರ್ಗಗಳು:

1. ಚೆನ್ನೈ - ಮೈಸೂರು ಮಾರ್ಗ

2. ಚೆನ್ನೈ - ತಿರುನಲ್ವೇಲಿ ಮಾರ್ಗ

3. ಚೆನ್ನೈ - ಕೊಯಮತ್ತೂರು ಮಾರ್ಗ

4. ತಿರುವನಂತಪುರಂ - ಕಾಸರಗೋಡು ಮಾರ್ಗ

5. ಚೆನ್ನೈ - ವಿಜಯವಾಡ ಮಾರ್ಗ

             ಮುಂದಿನ ದಿನಗಳಲ್ಲಿ ಆರನೆಯದನ್ನು ಘೋಷಿಸಲಾಗುವುದು ಎಂದು ದಕ್ಷಿಣ ರೈಲ್ವೆ ಹೇಳಿದೆ. ವಿಮಾನಯಾನ ವಲಯದಲ್ಲಿ ಪ್ರಯಾಣಿಕರಿಗೆ ಲಭ್ಯವಿರುವ ಸೇವೆಯ ಮಟ್ಟವನ್ನು ರೈಲ್ವೆ ಪ್ರಯಾಣಿಕರಿಗೆ ಒದಗಿಸುವ ಗುರಿ ಇದೆ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries