ಕಾಸರಗೋಡು: ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಜಿಲ್ಲಾ ಇನ್ಫರ್ಮೇಷನ್ ಕಚೇರಿಯಲ್ಲಿ ಕನ್ನಡ ವರದಿಗಾರರ ಯಾ ಉಪ ಸಂಪಾದಕರ ಪ್ಯಾನಲ್ ರಚಿಸುವ ನಿಟ್ಟಿನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡದಲ್ಲಿ ಪತ್ರಿಕಾ ಪ್ರಕಟಣೆಗಳು ಸೇರಿದಂತೆ ಅಧಿಕೃತ ಅಧಿಸೂಚನೆಗಳನ್ನು ಸಿದ್ಧಪಡಿಸಲು ಪ್ಯಾನಲ್ ರಚಿಸಲಾಗುವುದು. ಪದವೀಧರರಾಗಿದ್ದು, ಮಲಯಾಳದಿಂದ ಕನ್ನಡಕ್ಕೆ ಮತ್ತು ಪ್ರತಿಯಾಗಿ ಅನುವಾದ ಮಾಡಲು ತಿಳಿದಿರಬೇಕು. ಎರಡು ವರ್ಷಗಳ ಕೆಲಸದ ಅನುಭವಕ್ಕೆ ಆದ್ಯತೆ ನೀಡಲಾಗುತ್ತದೆ. ವಯಸ್ಸಿನ ಮಿತಿ 45 ವರ್ಷಗಳಾಗಿದ್ದು, ನ. 30ರ ಮುಂಚಿತವಾಗಿ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.