HEALTH TIPS

ಸಾಮರಸ್ಯದ ಚಳವಳಿಗಳಿಂದ ಮಾತ್ರ ಭಾಷೋನ್ನತಿ: ಚಲುವಾದಿ ಜಗನ್ನಾಥ

                     ಬೆಂಗಳೂರು: ಇಂದು ಭಾಷಾ ಚಳವಳಿ ವ್ಯಾಪಕವಾಗಿದೆ. ಆದರೆ ಅಂತಹ ಚರ್ಚೆಗಳು ಭಿನ್ನಹಾದಿ ತುಳಿಯುವ ಮೂಲಕ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದು, ಭಾಷೆಗಳ ಬೆಳವಣಿಗೆಗೆ ಪೂರಕವಾಗಿರದೆ ರಾಜಕೀಯ ಪ್ರತಿಷ್ಠೆಯ ಭೂಮಿಕೆಯಾಗಿ ಲಕ್ಷ್ಯ ಪ್ರಾಪ್ತಿಯ ಹಾದಿ ತಪ್ಪುತ್ತಿದೆ ಎಂದು ಸಂಶೋಧಕ ಚಲುವಾದಿ ಜಗನ್ನಾಥ ಅವರು ತಿಳಿಸಿದರು.

                ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ  ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಭಾಗವಾಗಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ‘ಕನ್ನಡ ಚಳವಳಿ: ನಡೆದು ಬಂದ ದಾರಿ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
                   ಭಾಷೆಗಳ ಬಗ್ಗೆ ವಿಭಿನ್ನ ಚರ್ಚೆಗಳು ಮೂಡಿಬರಬೇಕು. ಜ್ಞಾನಪ್ರದ ವಿಷಯ ವಿಸ್ತಾರತೆಗೆ ಇಂತಹ ಚಳವಳಿಗಳು ತೆರೆದುಕೊಂಡಾಗ ಪೂರಕ ಬೆಳವಣಿಗೆ ಸಾಧ್ಯವಾಗುವುದು. ಬೆಳವಣಿಗೆಗೆ ಪೂರಕವಾಗದ ಅನ್ಯ ಚರ್ಚೆಗಳು ಸ್ವರೂಪವನ್ನು ವಿರೂಪಗೊಳಿಸುವುದೇ ಹೊರತು ಬೆಂಬಲ ನೀಡದು. ಗಡಿ ವಿವಾದ, ಕಾವೇರಿ ಹೋರಾಟ, ನಂದಿನಿ-ಅಮುಲ್ ಪರ-ವಿರೋಧಗಳೆಲ್ಲ ಈ ರೀತಿಯಲ್ಲಿ ಹಾದಿತಪ್ಪಿದ ಭಾಷೆ, ಸಂಸ್ಕøತಿಗಳನ್ನು ಹಿನ್ನಡೆಗೆ ತಳ್ಳುವ ಹುನ್ನಾರಗಳಾಗಿ ಗ್ರಹಿಸಬೇಕೆಂದು ಅವರು ವಿಶ್ಲೇಶಿಸಿದರು. 
                    ಯುರೋಪಿಯನ್ ಚಿಂತನೆಗಳ ಫಲವಾಗಿ ಭಾಷೆ, ಭೂಗಡಿ ನಿರ್ಣಯ, ನೇಶನ್, ರಿಲೀಜಿನ್ ಕಲ್ಪನೆಗಳು ಭಾರತದ ಮೂಲ ಸ್ವರೂಪವನ್ನು ಭಿನ್ನಗೊಳಿಸಿದವು. 1871ರಲ್ಲಿ ಬ್ರಿಟಿಷರು ನಡೆಸಿದ ಭಾಷೆಗಳ ಆಧಾರದ ಜನಗಣತಿ, 1891 ಆರ್ಯ-ದ್ರಾವಿಡ ವಿಭಜನೆಯ ಗಣತಿ, ಜನ್ಮಸ್ಥಳ ಆಧಾರದ ಮೇಲಿನ ಗೆರೆಗಳೆಲ್ಲ ಒಡೆದು ಏಕತೆಗೆ ಧಕ್ಕೆ ತರುವ ಯತ್ನಗಳ ಪ್ರತೀಕವಾಗಿದೆ. ಈ ನಿರ್ಣಯಗಳನ್ನೇ ಇಂದಿಗೂ ಸ್ವಹಿತಾಸಕ್ತಿಗಳಿಗೆ ಕೆಲವರು ಬಳಸಿಕೊಳ್ಳುತ್ತಿರುವುದು ಭಾಷೆಯ ಬೆಳವಣಿಗೆಗಳಿಗೆ ಹೇರಿದ ಕೊಡಲಿಗಳಾಗಿ ನಾಶದೆಡೆಗೆ ಕೊಂಡೊಯ್ದಿದೆ ಎಂಬ ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಿರಬೇಕೆಂದು ಅವರು ತಿಳಿಸಿದರು.
              ಯುರೋಪಿನಲ್ಲಿ ಲ್ಯಾಟಿನ್ ಭಾಷೆಯ ಹಾಸುಹೊಕ್ಕಿನಿಂದ ಹಲವು ಇತರ ಭಾಷೆಗಳು ನಾಶಹೊಂದಿದೆ ಎಂಬ ಕಲ್ಪನೆಯಡಿ ಭಾರತದಲ್ಲೂ ಸಂಭವಿಸಿದೆ ಎಂದು ನಂಬಿಸಲಾಗಿದೆ. ಆದರೆ, ಸಂಸ್ಕøತ ಭಾಷೆಯ ಸಹಿತ ಎಲ್ಲಾ ಭಾಷೆಗಳ ಪರಸ್ಪರ ಕೊಂಡುಕೊಳ್ಳುವಿಕೆಯಿಂದ ಭಾಷೆಗಳೆಲ್ಲ ಇಲ್ಲಿ ಸಮೃದ್ದವಾಗಿದೆ ಎಂಬ ಸತ್ಯ ತಥ್ಯವಾಗಬೇಕು. ಯುರೋಪಿಯನ್ ಚೌಕಟ್ಟಿಗಿಂತ ಪ್ರತ್ಯೇಕವಾಗಿ ಅವಲೋಕನ ನಡೆಸುವ ಕ್ರಮ ನಮ್ಮಲ್ಲಿ ಬೆಳೆಯಬೇಕು. ಭಾಷೆ ಜೀವನದ ಭಾಗವಾಗಿದ್ದಾಗ ಕನ್ನಡ ಸಹಿತ ಸ್ಥಳೀಯ ಭಾಷೆಗಳು ಸಮೃದ್ದವಾಗುತ್ತದೆ. ಇಂತಹ ಸದಭಿಪ್ರಾಯದ ಚಟುವಟಿಕೆಗಳು ಸರ್ಕಾರದಿಂದ ಮಾತ್ರ ಸಾಧ್ಯವಾಗದು. ಸಾಮರಸ್ಯದೊಂದಿಗೆ ಬೆಸೆಯುವ ಚಳವಳಿಗಳು ರೂಪುಗೊಂಡಾಗ ಬೆಳವಣಿಗೆ ಸಕಾರಾತ್ಮವಾಗಿ ಸತ್ಪಥದ ಹಾದಿಯಲ್ಲಿ ಮೇರುತ್ವ ಪ್ರಾಪ್ತಿಗೆ ಕಾರಣವಾಗುತ್ತದೆ ಎಂದು ಅವರು ಕರೆನೀಡಿದರು.
              ರಾಷ್ಟ್ರೋತ್ಥಾನ ಪರಿಷತ್ತಿನ ಸಾಹಿತ್ಯ ವಿಭಾಗದ ಸಂಚಾಲಕ ವಿಘ್ನೇಶ್ವರ ಭಟ್ ಮಾತನಾಡಿ, ಹೃದಯ ವಿಶಾಲೆಯನ್ನು ಬೆಳೆಸಿ, ಪರಸ್ಪರ ಬೆಸೆಯುವ ಚಟುವಟಿಕೆಗಳಿಂದಷ್ಟೇ ಬೆಳವಣಿಗೆ ಸಾಧ್ಯ ಎಂದರು. ಶ್ರೀಮತಿ. ರಶ್ಮಿ.ವಿನಯ್ ಸ್ವಾಗತಿಸಿ, ವಂದಿಸಿದರು. ಚಾಣಕ್ಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಂಶೋಧಕ ಎಂ.ಎಸ್.ಚೈತ್ರ ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries