ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)39ನೇ ಜಿಲ್ಲಾ ಸಮ್ಮೇಳನವು ನವೆಂಬರ್ 30ರಂದು ಕಾಸರಗೋಡು ವಿದ್ಯಾನಗರ ಸನಿಹದ ಉದಯಗಿರಿಯ ಶ್ರೀಹರಿ ಸಭಾಂಗಣದಲ್ಲಿ ನಡೆಯಲಿದೆ.
ಸಾರ್ವಜನಿಕ ಸಭೆ, ವ್ಯಾಪಾರ ಮೇಳ, ಛಾಯಾಗ್ರಹಣ ವೀಡಿಯೋಗ್ರಫಿ ಸ್ಪರ್ಧೆ, ಪ್ರದರ್ಶನ ನಡೆಯುವುದು. ಸಾರ್ವಜನಿಕ ಸಭೆಯನ್ನು ಮಂಜೇಶ್ವರಂ ಶಾಸಕ. ಎ.ಕೆ.ಎಂ.ಅಶ್ರಫ್ ಉದ್ಘಾಟಿಸುವರು. ಮಧ್ಯಾಹ್ನ ನಡೆಯುವ ಪ್ರತಿನಿಧಿ ಸಮ್ಮೇಳನವನ್ನು ಸಂಗಟನೆ ರಾಜ್ಯಾಧ್ಯಕ್ಷ ಸಂತೋಷ್ ಫೆÇೀಟೋ ವಲ್ರ್ಡ್ ಉದ್ಘಾಟಿಸುವರು. ಎಕೆಪಿಎ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಸಿ.ಜಾನ್ಸನ್, ರಾಜ್ಯ ಕಾರ್ಯದರ್ಶಿ ಉಣ್ಣಿ ಕೂವೊಡ್, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಪಾಲ್ಗೊಳ್ಳುವರು.