ಕಾಸರಗೋಡು: ಕಾಂಗ್ರೆಸ್ ಕಾಸರಗೋಡು ಬ್ಲಾಕ್ ಸಮಿತಿಯ ನೂತನ ಕಚೇರಿ ಉದ್ಘಾಟನೆ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 106ನೇ ಜನ್ಮಜಯಂತಿಯನ್ನು ಆಚರಿಸಲಾಯಿತು.
ಕೆಪಿಸಿಸಿ ಸದಸ್ಯ ಪಿ.ಎ.ಆಶ್ರಫಲಿ ನೂತನ ಕಟ್ಟಡ ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜೀವ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಕೆ. ನೀಲಕಂಠನ್, ಕೆಪಿಸಿಸಿ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ವಕೀಲ ಎ.ಗೋವಿಂದನ್ ನಾಯರ್, ಉದುಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವಿ.ಭಕ್ತವತ್ಸಲನ್, ಮುಖಂಡರಾದ ಕೆ.ಖಾಲಿದ್, ವಕೀಲ ಜಿತೇಶ್ ಬಾಬು ಪಿ.ಕೆ., ಕೆ.ವಿ.ದಾಮೋದರನ್, ಅರ್ಜುನನ್ ತಾಯಲಂಗಾಡಿ, ಶಾಹುಲ್ ಹಮೀದ್, ಉಸ್ಮಾನ್ ಕಡವತ್, ಜಮೀಲಾ ಅಹ್ಮದ್, ಆರ್.ವಿಜಯಕುಮಾರ್, ಪ್ರಣವ್ ಆಳ್ವ, ಎನ್.ಎ.ಅಬ್ದುಲ್ ಖಾದರ್, ಉಮೇಶ್ ಅಣಂಗೂರು, ಹನೀಫ ಚೇರಂಗೈ, ಮುನೀರ್ ಬಾಂಗೋಡ್, ಕೆ.ಪಿ.ನಾರಾಯಣನ್ ನಾಯರ್, ಹಮೀದ್ ಕಂಬಾರ್, ಪಿ.ಕೆ.ವಿಜಯನ್, ಸಿ.ಜಿ.ಟೋನಿ, ರಫೀಕ್ ಅಬ್ದುಲ್ಲಾ, ಅಬ್ದುಲ್ ಸಮದ್, ಸುಮಿತ್ರನ್ ಪಿ.ಪಿ, ಉಸ್ಮಾನ್ ಅಣಂಗೂರು, ಪಿ.ಕುಞÂಕೃಷ್ಣನ್ ನಾಯರ್, ಅಶ್ರಫ್ ಸಿಲೋನ್, ಸಂತೋಷಕ್ರಾಸ್ತಾ, ಕೆ.ವೇಣುಗೋಪಾಲನ್, ಟಿ.ಎ.ಆಸಿಫ್ ಬೆದಿರ, ಕೆ.ವಿ.ಜೋಶಿ, ಕೆ.ಪಿ.ಜಯರಾಜನ್, ಎಂ.ಕೆ.ಚಂದ್ರಶೇಖರನ್ ಉಪಸ್ಥಿತರಿದ್ದರು.