HEALTH TIPS

ಹಾಸ್ಯಗಾರ ಪೆರುವಡಿ ನಾರಾಯಣ ಭಟ್ ನಿಧನ

              ಪುತ್ತೂರು: ಒಂದು ಶತಮಾನದ ಯಕ್ಷಗಾನ ಚರಿತ್ರೆಗೆ ಸಾಕ್ಷಿಯಂತೆ ಬದುಕಿದ ಹಾಸ್ಯಗಾರ ಪೆರುವಡಿ ನಾರಾಯಣ ಭಟ್ (96) ಮಂಗಳವಾರ ಪುತ್ತೂರಿನಆಸ್ಪತ್ರೆಯಲ್ಲಿ ವಯೋಸಹಜವಾಗಿ ನಿಧನರಾಗಿದ್ದಾರೆ.

            ಅವರು ಮೂವರು ಪುತ್ರಿಯರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಪುತ್ತೂರಿನ ಬಪ್ಪಳಿಗೆ ಸಮೀಪದ ತೆಂಕಿಲ ನೂಜಿ ಶ್ರೀದುರ್ಗಾ ನಿಲಯದ ನಿವಾಸಿ ಪೆರುವಡಿ ನಾರಾಯಣ ಭಟ್ ಆರನೇ ತರಗತಿಯವರೆಗೆ ವಿದ್ಯಾಬ್ಯಾಸ ಮಾಡಿದ ಬಳಿಕ ಎಂಟನೇ ವರ್ಷದಿಂದ ತಾಳಮದ್ದಳೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿ 14ನೇ ವಯಸ್ಸಿನಲ್ಲಿ ನಾಟ್ಯಾಬ್ಯಾಸ ಇಲ್ಲದೆ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟವನ್ನು ಮಾಡಿದ್ದರು.

                ಶುದ್ಧ ಪರಂಪರೆಯ ಹಾಸ್ಯಗಾರರಾದ ಪೆರುವಡಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಪೆರುವಡಿಯಲ್ಲಿ ಪದ್ಯಾಣ ಭೀಮ ಭಟ್ ಮತ್ತು ಗುಣವತಿ ಅಮ್ಮ ದಂಪತಿಗಳ ಮಗನಾಗಿ ಮೇ 28, 1927ರಂದು ಜನಿಸಿದರು. ಮಿತ್ತನಡ್ಕ (ಕರೋಪಾಡಿ) ಮತ್ತು ಪೆರುವಡಿ ಕುದ್ರಡ್ಕ ಶಾಲೆಗಳಲ್ಲಿ 6ನೇ ತರಗತಿವರೆಗೆ ಓದಿದ್ದರು. ತನ್ನ 14ನೇ ವಯಸ್ಸಿನಲ್ಲಿ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟ ಮಾಡಿದ ನಂತರ ಕುರಿಯ ವಿಠಲ ಶಾಸ್ತ್ರಿಗಳು ನಾಟ್ಯ ಕಲಿಯಲು ಇವರನ್ನು ಪ್ರೇರೇಪಿಸಿದರು.

ಪೆರುವಡಿ ನಾರಾಯಣ ಭಟ್ಟರು ಧರ್ಮಸ್ಥಳ, ಸುರತ್ಕಲ್, ಕದ್ರಿ, ನಂದಾವರ, ಅರುವ, ಕುಂಬಳೆ, ಬಪ್ಪನಾಡು ಮೊದಲಾದ ಮೇಳಗಳಲ್ಲಿ ತಿರುಗಾಟ ನಡೆಸಿದರು. 1954ರಲ್ಲಿ ಮುಲ್ಕಿ ಮೇಳದ ಸಂಚಾಲಕರಾಗಿ ಪೆರುವಡಿ ನಾರಾಯಣ ಭಟ್ಟರು ಮೇಳವನ್ನು 11 ವರ್ಷಗಳ ಕಾಲ ಮುನ್ನಡೆಸಿದ್ದರು. 17 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ನಡೆಸಿದ್ದರು.

               'ಪಾಪಣ್ಣ ವಿಜಯ - ಗುಣಸುಂದರಿ' ಪ್ರಸಂಗದ 'ಪಾಪಣ್ಣ' ಪಾತ್ರ ಇವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಪೆರುವಡಿ ನಾರಾಯಣ ಭಟ್ಟರು 'ಪಾಪಣ್ಣ ಭಟ್ರು' ಎಂದೇ ಪ್ರಸಿದ್ಧರಾದರು. ವೃತ್ತಿ ಸಂಕಷ್ಟವನ್ನು ಸಾರುವ ಮೂರ್ತೆಯ ವನಾಗಿ, ತಾಮಸಿ ಪ್ರವೃತ್ತಿಯ ರಾಕ್ಷಸ ದೂತನಾಗಿ, ಸಹಜ ಬದುಕಿಗೆ ಕನ್ನಡಿ ಹಿಡಿಯುವ ವಿಪ್ರನಾಗಿ, ದೇವತ್ವವನ್ನು ಎತ್ತಿ ಹಿಡಿವ ದೇವದೂತನಾಗಿ ಅಭಿನಯಿಸುತ್ತಾ ಇವರು ಎಲ್ಲಾ ಹಾಸ್ಯಗಾರರಿಗೂ ಆದರ್ಶರಾಗಿದ್ದರು. ಹಾಸ್ಯ ಪಾತ್ರದಲ್ಲಿ ಅವ ರಂತೆ ಭಾಷೆಯನ್ನು ಸೊಗಸಾಗಿ ದುಡಿಸಿಕೊಂಡವರು ವಿರಳ. ಮೂಲತ: ಹಾಸ್ಯಗಾರರಾದರೂ, ಗಂಭೀರ ಪೋಷಕ ಪಾತ್ರಗಳನ್ನೂ ಅವರು ಸಮರ್ಥವಾಗಿ ಪ್ರಸ್ತುತ ಡಿಸಿ ಜನಪ್ರಿಯ ರಾಗಿದ್ದರು.

               ಎರಡು ವರ್ಷಗಳ ಹಿಂದೆ ಯಕ್ಷಗಾನ ಕಲಾರಂಗದ ನೇತೃತ್ವದಲ್ಲಿ ಆಯೋಜಿಸಲಾದ ಕೋಳ್ಯೂರು ವೈಭವದ ಸಮಾ ರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಅದಮಾರು ಮಠದ ವತಿಯಿಂದ ನೀಡಲಾಗುವ 'ಶ್ರೀನರಹರಿ ತೀರ್ಥ ಯಕ್ಷ ಪ್ರಶಸ್ತಿ'ಯನ್ನು 2022ನೇ ಸಾಲಿನಲ್ಲಿ ಪೆರುವಡಿ ಅವರಿಗೆ ನೀಡಿ ಗೌರವಿಸಲಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries