ಐಜ್ವಾಲ್: ವಿಧಾನಸಭೆ ಚುನಾವಣೆಯ ಮತಎಣಿಕೆ ದಿನಾಂಕ ಮುಂದೂಡುವ ಕುರಿತು ಚುನಾವಣಾ ಆಯೋಗ(ಇ.ಸಿ) ಮೌನವಹಿಸಿರುವುದನ್ನು ವಿರೋಧಿಸಿ ರಾಜ್ಯದ ಸಾಮಾಜಿಕ ಕಾರ್ಯಕರ್ತ ಲಾಲ್‌ಬಿಯಾಕ್‌ಥಂಗಾ (65) ಮಂಗಳವಾರ ನಿರಶನ ಕೈಗೊಂಡರು. ಮತಎಣಿಕೆಯನ್ನು ಡಿಸೆಂಬರ್ 3ಕ್ಕೆ ಇ.ಸಿ ನಿಗದಿಪಡಿಸಿದೆ.

ಮನವಿಗೆ ಇ.ಸಿ ಓಗೊಡದ ಕಾರಣ ಮತದಾನದ ದಿವಸ ಐಜ್ವಾಲ್‌ನಲ್ಲಿಯ ರಾಜ್ಯ ಸರ್ಕಾರದ 'ವನಾಪ ಹಾಲ್'ನಲ್ಲಿ ಅವರು ನಿರಶನ ಕೈಗೊಂಡಿದ್ದಾರೆ. ತಾವು ಮತದಾನವನ್ನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಕಾಲ್ನಡಿಗೆಯಲ್ಲಿ ಸಾವಿರಾರು ಕಿಲೋಮೀಟರ್ ಸಂಚರಿಸಿ ಹಲವಾರು ಸಾಮಾಜಿಕ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿರುವ ಇವರು ಮಿಜೋರಾಂನಲ್ಲಿ 'ವಾಕಥಾನ್ ಮ್ಯಾನ್' ಎಂದೇ ಪ್ರಸಿದ್ಧರು.