ಕುಂಬಳೆ: ಶ್ರೀ ದುರ್ಗಾಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ ಧರ್ಮತ್ತಡ್ಕದಿಂದ ರಾಜ್ಯಮಟ್ಟದ ಪ್ರೌಢಶಾಲಾ ವಿಭಾಗದ ಗಣಿತಮೇಳದಲ್ಲಿ ಭಾಗವಹಿಸಲು ಮೂರು ಮಂದಿ ಸ್ಪರ್ಧಾಳುಗಳು ಆಯ್ಕೆಯಾಗಿದ್ದಾರೆ. ಅಂಬಲತ್ತರದಲ್ಲಿ ನಡೆದ ಜಿಲ್ಲಾ ಮಟ್ಟದ ಗಣಿತಮೇಳದಲ್ಲಿ ಜಿಯೋಮೆಟ್ರಿಕ್ ಚಾರ್ಟ್ ವಿಭಾಗದಲ್ಲಿ 9ನೇ ತರಗತಿಯ ಡಾನಿಕಾ ಪಹಲ್ ಆರ್. ಪ್ರಥಮ, ಅದರ್ ಚಾರ್ಟ್ ವಿಭಾಗದಲ್ಲಿ 10 ನೇ ತರಗತಿಯ ಸಾನ್ವಿ ಎಸ್. ವಿ. ದ್ಚಿತೀಯ, ಟೀಚಿಂಗ್ ಎಯ್ಡ್ ವಿಭಾಗದಲ್ಲಿ ಅಧ್ಯಾಪಕ ರಕ್ಷಿತ್ ಕುಮಾರ್ ಎಂ. ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದುಕೊಂಡಿದ್ದಾರೆ.
ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ 10ನೇ ತರಗತಿಯ ಮನೋಜ್ಞ ಸಿ. ಎಚ್. ತೃತೀಯ ಸ್ಥಾನವನ್ನು ಪಡೆದಿದ್ದಾಳೆ. ಜಿಲ್ಲಾ ಮಟ್ಟದಲ್ಲಿ ಸ್ಲರ್ಧಿಸಿದ ಎಲ್ಲಾ ಸ್ಪರ್ಧಾಳುಗಳು ಎ ಗ್ರೇಡ್ ಪಡೆದು ಸಮಗ್ರ 59 ಅಂಕಗಳು ಲಭಿಸಿ ಶಾಲೆಯು ದ್ವಿತೀಯ ಸ್ಥಾನವನ್ನು ಪಡೆದಿದೆ.