ಕಾಸರಗೋಡು: ಜೀವನ ಶೈಲಿ ರೋಗ ಜನರನ್ನು ಅತಿಯಾಗಿ ಕಾಡುತ್ತಿದ್ದು, ಇದಕ್ಕೆ ಸೂಕ್ತ ಯೋಜನೆಯನ್ನು ಲಯನ್ಸ್ ಡಿಸ್ಟ್ರಿಕ್ಟ್-318ಇ ಜಾರಿಗೊಳಿಸುತ್ತಿರುವುದಾಗಿ ಲಯನ್ಸ್ ಪದಾಧಿಕಾರಿ ವಿ. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಲವಾರು ಮಂದಿ ಜೀವನಶೈಲಿ ರೋಗಗಳಿಗೆ ಬಲಿ ಬೀಳುತ್ತಿದ್ದು, ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ದೇಶದಲ್ಲಿಯೇ ಕೇರಳ ಮುಂಚೂಣಿಯಲ್ಲಿದೆ. ಮಕ್ಕಳಲ್ಲಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳು ಹೆಚ್ಚಾಗುತ್ತಿರುವುದಾಗಿ ಸಮೀಕ್ಷೆಗಳು ಸೂಚಿಸುತ್ತವೆ. ಕೇವಲ ಔಷಧದಿಂದ ಆರೋಗ್ಯ ಕಾಪಾಡಲು ಸಾಧ್ಯವಿಲ್ಲ. ಇದಕ್ಕೆ ಸರಿಯಾದ ಆಹಾರ ಮತ್ತು ವ್ಯಾಯಾಮದ ಅಗತ್ಯವಿದೆ.
ಈ ಗುರಿಯೊಂದಿಗೆ ಲಯನ್ ಡಿಸ್ಟ್ರಿಕ್ಟ್-318ಇ 'ಜೀವಂ'ಎಂಬ ಯೋಜನೆ ಜಾರಿಗೊಳಿಸಿದೆ. ಕಾಸರಗೋಡು, ಕಣ್ಣೂರು, ಕೋುಕ್ಕೋಡ್, ವಯನಾಡು ಮತ್ತು ಮಾಹಿ ಜಿಲ್ಲೆಗಳ ಶಾಲಾ ಮಕ್ಕಳಿಗೆ ವೈಜ್ಞಾನಿಕ ವ್ಯಾಯಾಮದ ತರಬೇತಿ ನೀಡಲಾಗುತ್ತದೆ. ಮಕ್ಕಳ ದಿನಾಚರಣೆ ಮತ್ತು ವಿಶ್ವ ಮಧುಮೇಹ ದಿನವಾದ ನ.14 ರಂದು ಬೆಳಿಗ್ಗೆ 9ಕ್ಕೆ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಯೋಜನೆಯನ್ನು ಜಿಲ್ಲಾ ಪೆÇಲೀಸ್ ಮುಖ್ಯಸ್ಥ ಡಾ.ವೈಭವ್ ಸಕ್ಸೇನಾ ಐಪಿಎಸ್ ಉದ್ಘಾಟಿಸುವರು. ಮಧುಮೇಹ ಮುಕ್ತ ಹೊಸ ಪೀಳಿಗೆಯನ್ನು ಸೃಷ್ಟಿಸುವುದು, ಜೀವನಶೈಲಿ ರೋಗಗಳ ಬಗ್ಗೆ ಜಾಗೃತಿ ಮತ್ತು ಮೊಬೈಲ್ ಟು ಮೊಬಿಲಿಟಿಯ ಗುರಿಯನ್ನು ಯೋಜನೆ ಹೊಂದಿದೆ. ಚಂದ್ರಗಿರಿ ಲಯನ್ಸ್ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಕೆ ವಿನೋದ್ ಕುಮಾರ್, ಷರೀಫ್ ಕಾಪಿಲ್, ಡಾ. ಅಬಿದ್ ನಲಪಾಡ್, ಸಿ.ಎಲ್ ರಶೀದ್, ಎಂ.ಎಂ.ನೌಶಾದ್, ಸುನೈಫ್ ಮತ್ತು ಬಾಲಕೃಷ್ಣನ್ ಮಾಸ್ಟರ್ ಉಪಸ್ಥಿತರಿದ್ದರು.