ಕೊಚ್ಚಿ: ವಿಲ್ಲಾ ನೀಡುವುದಾಗಿ ಭರವಸೆ ನೀಡಿ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಕ್ರಿಕೆಟಿಗ ಶ್ರೀಶಾಂತ್ ಹೈಕೋರ್ಟ್‍ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ನವೆಂಬರ್ 28ರ ಮಂಗಳವಾರದಂದು ನ್ಯಾಯಾಲಯ ಜಾಮೀನು ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ನ್ಯಾಯಮೂರ್ತಿ ಮುಹಮ್ಮದ್ ನಿಯಾಜ್ ಹೇಳಿದ್ದಾರೆ.
ಶ್ರೀಶಾಂತ್ ತಮ್ಮ ಮೇಲಿನ ಆರ್ಥಿಕ ವಂಚನೆ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವ್ಯವಹಾರದ ದೂರು ಆಧಾರರಹಿತವಾಗಿದೆ. ದೂರುದಾರರನ್ನು ಭೇಟಿ ಮಾಡಿಲ್ಲ ಎಂದು ಶ್ರೀಶಾಂತ್ ಹೇಳಿದ್ದಾರೆ. ಶ್ರೀಶಾಂತ್ ವಿರುದ್ಧ ಲಕ್ಷಗಟ್ಟಲೆ ಹಣಕಾಸು ವಂಚನೆ ಮಾಡಿರುವ ಆರೋಪ ಸರಿಗ್ಗೆ ನೇರ ಸಂಬಂಧವಿಲ್ಲ, ಯಾವುದೇ ಹಣಕಾಸಿನ ವಹಿವಾಟು ನಡೆದಿಲ್ಲ ಎಂದು ಶ್ರೀಶಾಂತ್ ಕುಟುಂಬದವರು ವಿವರಿಸಿದ್ದಾರೆ.
ಕಣ್ಣೂರು ಕಣ್ಣಪುರಂ ನಿವಾಸಿ ಸರಿಗ್ ಬಾಲಗೋಪಾಲ್ ಎಂಬುವವರ ದೂರಿನ ಮೇರೆಗೆ ಶ್ರೀಶಾಂತ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳಿದ ಆರೋಪಿಗಳು ಉಡುಪಿ ಮೂಲದ ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ. ವೆಂಕಟೇಶ್ ಕಿಣಿ ಅವರು ತಮ್ಮ ಜಮೀನಿನಲ್ಲಿ ವಿಲ್ಲಾ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ 10 ಲಕ್ಷ ರೂ.ವಂಚಿಸಿರುವುದಾಗಿ ಆರೋಪಿಸಲಾಗಿದೆ.
ಅವ್ಯವಹಾರದ ದೂರಿನ ಮೇರೆಗೆ ಕಣ್ಣೂರು ಪೋಲೀಸರು ಶ್ರೀಶಾಂತ್ ಸೇರಿದಂತೆ ಮೂವರ ವಿರುದ್ಧ ಪ್ರಾಥಮಿಕ ತನಿಖಾ ವರದಿ ದಾಖಲಿಸಿದ್ದರು. ಈ ಸಂಬಂಧ ಕಣ್ಣೂರು ನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.