ಮೈ ತೂಕ ಕಡಿಮೆ ಮಾಡಲು ನೀವು ಜಾಹೀರಾತಿನಲ್ಲಿ ತೋರಿಸುವ ಪೌಡರ್‌ಗಳನ್ನು ತೆಗೆದುಕೊಂಡು ಆರೋಗ್ಯ ಕೆಡಿಸಿಕೊಳ್ಳುವ ಬದಲಿಗೆ ನೀವಿ ನಮ್ಮದೇ ಆಹಾರ ಶೈಲಿ ಸೇವಿಸಿದರೆ ಸಾಕು ಆರೋಗ್ಯಕರ ಮೈ ತೂಕ ನಿಮ್ಮದಾಗಿಸಿಕೊಳ್ಳಬಹುದು. ಇತ್ತೀಚಿನ ಜೀವನಶೈಲಿ, ಬದಲಾದ ನಮ್ಮ ಆಹಾರ ಪದ್ಧತಿ ಇವೆಲ್ಲಾ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ನೀವು ಮೈ ತೂಕ ಕಡಿಮೆ ಮಾಡಲು ಬಯಸಿದರೆ ಆರೋಗ್ಯಕರ ಆಹಾರಕ್ರಮದ ಮೂಲಕ ಕೂಡ ಮೈ ತೂಕ ಕಡಿಮೆ ಮಾಡಿಕೊಳ್ಳಬಹುದು ನೋಡಿ:
ಬ್ರೇಕ್‌ಫಾಸ್ಟ್
ಇವುಗಳನ್ನು ನಿಮಗೆ ಇಷ್ಟವಾಗುವ ಬ್ರೇಕ್‌ಫಾಸ್ಟ್ ಸೇವಿಸಬಹುದು
ಬೆರ್ರಿ, ನಟ್ಸ್ ಹಾಕಿ ತಯಾರಿಸಿದ ಬೆರ್ರಿ
ಇಡ್ಲಿ ಅಥವಾ ದೋಸೆ , ಅದಕ್ಕೆ ಚಟ್ನಿ ಅಥವಾ ಸಾಂಬಾರ್
ಅವಲಕ್ಕಿ, ಮೊಸರು
ಲಂಚ್
ಕೆಂಪಕ್ಕಿ ಅನ್ನ, ತರಕಾರಿ ಸಾಂಬರ್, ಚಿಕನ್ ಸಾರು ಅಥವಾ ಮೀನು ಕರಿ
(ಕಬಾಬ್, ಮೀನು ಫ್ರೈ ಅಂತ ಮಾಡಿ ತಿನ್ನಬಾರದು)
ಇಲ್ಲದಿದ್ದರೆ ನವಣೆ ಹಾಗೂ ತರಕಾರಿಗಳನ್ನು ಹಾಕಿ ಉಪ್ಪಿಟ್ಟು ಮಾಡಿ ಸವಿಯಬಹುದು.
ನೀವು ಅನ್ನ ಬೇಡವೆಂದರೆ ಚಪಾತಿ ಸವಿಯಬಹುದು
ತೂಕ ಇಳಿಕೆ
* ಸೀಸನಲ್ ಹಣ್ಣುಗಳು
* ತರಕಾರಿಗಳು, ಕ್ಯಾರೆಟ್, ಸೌತೆಕಾಯಿ
* ನಟ್ಸ್
* ಯಾವುದೇ ಫ್ಲೇವರ್ ಸೇರಿಸದ ಮೊಸರು
ಡಿನ್ನರ್‌ಗೆ
ಸ್ವಲ್ಪ ಕೆಂಪಕ್ಕಿ ಅನ್ನ ಅಥವಾ ಕಿಚಡಿ
ಗ್ರಿಲ್ಡ್ ಫಿಶ್ ಹಾಗೂ ಬೇಯಿಸಿದ ತರಕಾರಿ
ಈ ಆಹಾರಕ್ರಮದ ಜೊತೆಗೆ ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ, ನಡೆಯುವ ವ್ಯಾಯಾಮವಾದರೂ ಸರಿ ಮಾಡಿದರೆ ಸಾಕು ಇಂದೇ ತಿಂಗಳಿನಲ್ಲಿ ನಿಮ್ಮ ತೂಕದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುವುದು.
ತೂಕ ಇಳಿಕೆಯ ಆಹಾರಕ್ರಮ ಪಾಲಿಸುವವರು ಈ ವಿಷಯಗಳತ್ತ ಗಮನಹರಿಸಿ.
ಸಂಸ್ಕರಿಸಿದ ಆಹಾರ ಸೇವಿಸಲೇಬೇಡಿ
ನೀವು ತೂಕ ಇಳಿಕೆಯ ಡಯಟ್ ಪಾಲಿಸುವಾಗ ಸಂಸ್ಕರಿಸಿದ ಆಹಾರ ಸೇವಿಸಬೇಡಿ, ಅನಾರೋಗ್ಯಕರ ಕೊಬ್ಬಿನಂಶ, ಸಕ್ಕರೆಯಂಶ, ಅತ್ಯಧಿಕ ಉಪ್ಪಿನಂಶ ಇರುವ ಆಹಾರಗಳನ್ನು ಸೇವಿಸಬೇಡಿ. ಇಂಥ ಆಹಾರಗಳು ಮೈ ತೂಕವನ್ನು ಹೆಚ್ಚು ಮಾಡುತ್ತದೆ, ಆದ್ದರಿಂದ ಈ ಆಹಾರಗಳಿಂದ ದೂರಿವಿರಿ.
ನಿಮ್ಮ ಆಹಾರಕ್ರಮದಲ್ಲಿ ಪ್ರೊಟೀನ್ ಅಧಿಕವಿರಲಿ'
ನೀವು ತೂಕ ಇಳಿಕೆಗೆ ಆಹಾರ ಸೇವಿಸುವಾಗ ಪ್ರೊಟೀನ್ ಇರುವ ಆಹಾರ ಸೇವಿಸಿ. ಚಿಕನ್ ಗ್ರಿಲ್ಡ್, ಮೊಟ್ಟೆ ಈ ಬಗೆಯ ಆಹಾರಗಳಲ್ಲಿ ಪ್ರೊಟೀನ್ ಹೆಚ್ಚಿರುತ್ತದೆ.
ಸಕ್ಕರೆಯಂಶದ ಆಹಾರ ಪದಾರ್ಥ ದೂರವಿರಿ
ಟೀ, ಕಾಫಿ ಯಾವುದಕ್ಕೂ ಸಕ್ಕರೆ ಬಳಸಬೇಡಿ, ಸಿಹಿ ತಿಂಡಿಗಳಿಗೆ ಸಂಪೂರ್ಣ ಗುಡ್‌ಬೈ ಹೇಳಿದರೆ ತೂಕ ಇಳಿಕೆಗೆ ತುಂಬಾ ಒಳ್ಳೆಯದು.
ನಾರಿನಂಶ ಅಧಿಕವಿರುವ ಆಹಾರ ಸೇವಿಸಿ
ನಾರಿನಂಶ ಅಧಿಕವಿರುವ ಆಹಾರ ಸೇವಿಸುವುದರಿಂದ ಚಯಪಚಯ ಕ್ರಿಯೆ ಉತ್ತಮವಾಗಿರುವುದು. ಆದರೆ ತರಕಾರಿಯನ್ನು ಹೆಚ್ಚಾಗಿ ಬಳಸಿ.
ಆಹಾರಕ್ರಮದಲ್ಲಿ ಹೀಗೆ ಚಿಕ್ಕ ಪುಟ್ಟ ವಿಷಯಗಳ ಕಡೆ ಗಮನ ನೀಡಿದರೆ ಸಾಕು ನಿಮ್ಮ ಮೈ ತೂಕದಲ್ಲಿ ಗಮನಾರ್ಹ ಬದಲಾವಣೆಯಾಗುವುದು. ಮೈ ತೂಕ ಕಡಿಮೆ ಮಾಡಲು ಕ್ರಾಷ್ ಡಯಟ್ ಮಾಡುವ ಬದಲಿಗೆ ಭಾರತೀಯ ಆಹಾರಕ್ರಮ ಸೇವಿಸಿದರೆ ಸಾಕು, ಮೈ ತೂಕ ಕಡಿಮೆ ಮಾಡಿ.